ಮನುಷ್ಯನಿಗೆ ಸಾಮಾಜಿಕ ಬಲ ತುಂಬುವ ಹಬ್ಬಗಳು

11-SGN-1
Published on

ಶಿಗ್ಗಾಂವಿ: ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ ಮಾತ್ರವಲ್ಲದೇ, ಮನುಷ್ಯನಿಗೆ ನೈತಿಕತೆ ಮತ್ತು ಸಾಮಾಜಿಕ ಶಕ್ತಿ ತುಂಬಲು ಸಹಕಾರಿಯಾಗಿವೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ತಾಲೂಕಿನ ಬಾಡ ಗ್ರಾಮದಲ್ಲಿ ಶ್ರೀ ಬಸವೇಶ್ವರ ಗಜಾನನ ಯುವಕ ಮಂಡಳಿಯಿಂದ ಪ್ರತಿಷ್ಠ್ಠಾಪನೆ ಮಾಡಿರುವ ಸಾರ್ವಜನಿಕ ಗಣೇಶ ಉತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗಣೇಶ ಉತ್ಸವಗಳಲ್ಲಿ ನಮ್ಮ ಸಂಸ್ಕೃತಿ, ಆಚಾರ, ಪರಸ್ಪರ ಸಂಬಂಧ ಬೆಸೆಯುವಂಥ ಒಳ್ಳೆಯ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ತಿಪ್ಪಣ್ಣ ಸಾತಣ್ಣವರ, ಎಂ.ಎನ್. ವೆಂಕೋಜಿ, ಗುರುನಗೌಡ ಪಾಟೀಲ, ನಜೀರ್ ಶೇತಸನದಿ, ಸುರೇಶ ಚನ್ನಪ್ಪನವರ, ನಾಗರಾಜ ವೆಂಕೋಜಿ, ಪ್ರವೀಣ ಚಿನ್ನಪ್ಪನವರ, ಮಂಜುನಾಥ ಸಣ್ಣಬಸಪ್ಪನವರ, ಜಗದೀಶ ದೇವಶೆಟ್ಟಿ, ಪ್ರಕಾಶ ತೊಂಡುರ, ಗುರುರಾಜ ಸಿದ್ದಪ್ಪನವರ, ಬಸವರಾಜ ಲಂಗೋಟಿ, ಸುನೀಲ ಸಿದ್ದಣ್ಣವರ, ರಮೇಶ ಬಾರಿಗಿಡದ, ಬಸವೇಶ್ವರ ಗಜಾನನ ಯುವಕ ಮಂಡಳಿ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net