ಹಬ್ಬಗಳಿಂದ ಪರಸ್ಪರ ಬಾಂಧವ್ಯ ಗಟ್ಟಿ

Festivals strengthen mutual bonds
ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಶ್ರೀ ಗಜಾನನ ಮಿತ್ರ ಮಂಡಳಿಯ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ ಕಾಂತಿ ಮಾತನಾಡಿದರು. ಹನುಮಂತ ಸವದಿ, ದಾನಪ್ಪ ಆಸಂಗಿ ಇದ್ದರು.
Published on

ರಬಕವಿ-ಬನಹಟ್ಟಿ: ಹಬ್ಬ, ಉತ್ಸವಗಳಿಂದ ಸಾಮಾಜಿಕ ಸಂಘಟನೆಯಾಗುವ ಜತೆಗೆ ಪರಸ್ಪರ ಬಾಂಧವ್ಯವೂ ಹೆಚ್ಚುತ್ತದೆ ಎಂದು ನಾವಲಗಿ ಗ್ರಾಪಂ ಅಧ್ಯಕ್ಷೆ ರೇಖಾ ಕಾಂತಿ ಹೇಳಿದರು.

ಭಾನುವಾರ ಸಂಜೆ ತಾಲೂಕಿನ ನಾವಲಗಿ ಗ್ರಾಮದ ಸದಾಶಿವ ಗಜಾನನ ಮಿತ್ರಮಂಡಳಿಯ 25ನೇ ವರ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ವರ ಶಂಕರ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸನಾತನ ಹಿಂದು ಧರ್ಮದ ಪ್ರತಿಯೊಂದು ಹಬ್ಬವೂ ಪ್ರಾಮುಖ್ಯ ಹೊಂದಿದ್ದು, ಪರಂಪರಾಗತ ಆಚರಣೆಗಳಿಂದ ಒಗ್ಗಟ್ಟು ಮೂಡುತ್ತದೆ. ನಮ್ಮ ಪಾರಂಪರಿಕ ಆಚರಣೆಗಳ ಜೊತೆಗೆ ಸಂಸ್ಕಾರ, ಸಂಸ್ಕೃತಿಯ ಪರಿಚಯ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.

ಯುವಕರ ಒಗ್ಗಟ್ಟಿನ ಬಲವೇ ಸಂಘ. ಅಂಥ ಸಂಘ ಇಂದು ರಜತ ಮಹೋತ್ಸವ ಆಚರಿಸುವಂತಾಗಿದೆ. ಅನ್ನ ಸಂತರ್ಪಣೆ ಜೊತೆಗೆ ಪ್ರತಿಭಾ ಪುರಸ್ಕಾರ ಸೇರಿ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಕ್ಕಳು, ಸಾಧಕರಿಗೆ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.

ಗ್ರಾಮದ ಹಿರಿಯರಾದ ಹನುಮಂತ ಸವದಿ, ದಾನಪ್ಪ ಆಸಂಗಿ, ವಿಠಲ ಜನವಾಡ, ಆನಂದ ಕಂಪು, ಮುತ್ತಪ್ಪ ಅಂಗಡಿ, ಸದಾಶಿವ ಸವದಿ, ಈರಪ್ಪ ಕಡಕಭಾವಿ, ಬಸವರಾಜ ಗಣಿ, ಸಿದ್ದು ಆಸಂಗಿ, ಶಿವಲಿಂಗ ಅಂಗಡಿ, ಸಿದ್ದು ಕಂಚು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net