ಹಬ್ಬಗಳಿಂದ ಎಲ್ಲರಲ್ಲೂ ಮೂಡುತ್ತದೆ ಒಗ್ಗಟ್ಟು

hbr
Published on

ಹೆಬ್ರಿ: ನಮ್ಮ ಹಬ್ಬಗಳು ಎಲ್ಲರನ್ನು ಒಂದುಗೂಡಿಸುತ್ತದೆ. ಸಹಕಾರ ತತ್ವದಿಂದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ. ದೀಪಾವಳಿಯು ಅಂಧಕಾರವನ್ನು ನಿವಾರಿಸಿ ಎಲ್ಲರ ಜೀವನವನ್ನು ಬೆಳಗಲಿ ಎಂದು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜೇಶ್ ಹೇಳಿದರು.

ಶಾಂತಿನಿಕೇತನ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಜನೆ, ಲಕ್ಷ್ಮೀಪೂಜೆ, ಹಸಿರು ಪಟಾಕಿ ಪ್ರದರ್ಶನ ಜರುಗಿತು. ಶಾಂತಿನಿಕೇತನ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ರೀ, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ ಎಸ್.ಮರಸಣಿಗೆ, ನಳಿನಿ, ಕೆ.ಗಣೇಶ್, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net