

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಂದಿನ ಯುವ ಪೀಳಿಗೆ ಹಬ್ಬಗಳ ಮಹತ್ವವನ್ನು ತಿಳಿಯುವುದು ಅವಶ್ಯಕ. ಹಬ್ಬ-ಹರಿದಿನಗಳು ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂದು ಶ್ರೀ ಜಗದ್ಗುರು ಮೂರಸಾವಿರ ಮಠ ವಿದ್ಯಾವರ್ಧಕ ಸಂಘದ ನಿರ್ದೇಶಕ ಸದಾನಂದ ಡಂಗನವರ ಹೇಳಿದರು.
ಹುಬ್ಬಳ್ಳಿಯ ಎಸ್ಜೆಎಂವಿ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕದ ಆಶ್ರಯದಲ್ಲಿ ವಾಣಿಜ್ಯ ಹಾಗೂ ಕಲಾ ಪದವಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸಾಂಪ್ರದಾಯಿಕ ಹಬ್ಬಗಳ ಆಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಗೊಂದು ಗಿಡ ನೆಟ್ಟು ಬರ ಅಟ್ಟು ಎಂಬಂತೆ ಪ್ರತಿಯೊಬ್ಬರು ಮನೆಗೊಂದು ಗಿಡ ನೆಟ್ಟು ಪೋಷಿಸಬೇಕು. ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯು ಡಾ. ಸಿಸಿಲಿಯಾ ಡಿಕ್ರೂಜ್, ಪ್ರಾಚಾರ್ಯ ಎಂ. ಬಿ. ಆಡೂರ, ಸಂಯೋಜಕ ಎ. ಎಚ್. ಕೊರವರ, ಬಸವರಾಜ ಸಾಲಿಮಠ, ಅಣ್ಣಪ್ಪ ಕೊರವರ, ಮಲ್ಲಿಕಾರ್ಜುನ ಅಂಗಡಿ, ಸಿ.ಎಂ. ಕೊಡ್ಲಿ, ಇತರರು ಇದ್ದರು.