

ಅಳವಂಡಿ: ಎಲ್ಲ ಧರ್ಮಗಳು ಶಾಂತಿಯ ಸಂದೇಶವನ್ನು ಸಾರುತ್ತವೆ. ನಮ್ಮ ದೇಶ ಬಹು ಭಾಷೆ, ಜನಾಂಗ ಹೊಂದಿದ್ದು, ಎಲ್ಲ ಜನಾಂಗದವರು ಒಗ್ಗಟ್ಟಿನಿಂದ ಜೀವನ ನಡೆಸಬೇಕಿದೆ. ಇದರಿಂದ ದೇಶದ ಅಭಿವೃದ್ಧಿ ಸಾದ್ಯ. ಸಹೋದರತ್ವ ಹಾಗೂ ಸಾಮರಸ್ಯದ ಜೀವನ ನಡೆಸಿ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಗುರುಮೂರ್ತಿಸ್ವಾಮಿ ಇನಾಮದಾರ ಹೇಳಿದರು.
ಇದನ್ನೂ ಓದಿ:ಈದ್ ಮಿಲಾದ್ ಪ್ರಯುಕ್ತ ರಕ್ತದಾನ
ಗ್ರಾಮದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ಅಂಜುಮನ್ ಇಸ್ಲಾಂ ಕಮೀಟಿ, ಮುಸ್ಲಿಂ ಪಂಚ ಕಮೀಟಿ, ನೌಜವಾನ್ ಕಮೀಟಿ ಹಾಗೂ ಗ್ರಾಮಸ್ಥರಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊಹಮದ್ ಪೈಗಂಬರರು ಜಾತಿ, ಮತ, ಧರ್ಮ, ಪಂಥ ಮೀರಿ ಮನುಕುಲ ಒಂದೇ ಎಂಬ ಶಾಂತಿ ಸಂದೇಶ ಸಾರಿದ್ದಾರೆ. ಸಂತರು, ಮಹಾತ್ಮರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಿ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಚಿಂತಿಸಿ ಎಂದರು.
ಪ್ರಮುಖರಾದ ಭರಮಪ್ಪ ನಗರ, ಅನ್ವರ್ ಗಡಾದ, ಗುರುಬಸವರಾಜ ಹಳ್ಳಿಕೇರಿ, ಅರವಿಂದಪ್ಪ, ಮಂಜುನಾಥ, ಇಸ್ಮಾಯಿಲ್, ಮೆಹಬೂಬ್, ಹೊನ್ನಪ್ಪಗೌಡ, ಮಲ್ಲಪ್ಪ, ತೋಟಯ್ಯ, ರೇಣುಕಪ್ಪ, ಹನುಮಂತ, ನಜೀರುದ್ದೀನ್, ಮಾಬುಸಾಬ್, ಮುಸ್ತಫಾ, ರಾಜೇಸಾಬ್, ತೌಸಿಫ್, ರಾಜಾಹುಸೇನ್, ಭೀಮರಡ್ಡಿ, ದೇವಪ್ಪ, ನಿಂಗಪ್ಪ, ವೀರಭದ್ರಯ್ಯ, ಶ್ರೀನಿವಾಸ, ಚನ್ನಪ್ಪ, ಸತೀಶ, ಗಿರೀಶ ಇತರರಿದ್ದರು.