ಹಬ್ಬಗಳು ಬಾಂಧವ್ಯದ ಪ್ರತೀಕ

9 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತಮ್ಮದೇ ಆದ ವೈಶಿಷ್ಟೃವಿದ್ದು, ಪ್ರತಿ ಹಬ್ಬವೂ ಬಾಂಧವ್ಯವೃದ್ಧಿಯ ಆಶಯಗಳಿಂದಲೇ ರೂಪಿಸಲ್ಪಟ್ಟಿವೆ ಎಂದು ವಕೀಲ ರವಿ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸ್ಫೂರ್ತಿ ಟ್ರಸ್ಟ್ ವತಿಯಿಂದ ಇಲ್ಲಿನ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮಹಿಳೆಯರು ಮತ್ತು ಮಕ್ಕಳಿಗೆ ಗುರುವಾರ ಏರ್ಪಡಿಸಿದ್ದ ಗಾಯನ, ಛದ್ಮವೇಷ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬದಲಾದ ಸಂದರ್ಭದಲ್ಲಿ ಹಬ್ಬಗಳು ತಮ್ಮ ಮೂಲ ಆಶಯದಿಂದ ವಿಮುಖವಾಗುತ್ತಿವೆ. ನಮ್ಮ ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಉಳಿಸಿ ಬೆಳೆಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣ ಎಂದರು.
ಟ್ರಸ್ಟ್ ಅಧ್ಯಕ್ಷೆ ರೂಪಾ ಚೌಧರಿ, ಡಾ.ವೈಷ್ಣವಿ ಸತೀಶ, ಉದ್ಯಮಿ ಅಪರ್ಣಾ ಪೂಜಾರಿ, ಕಿರಣ ಜೋರಾಪುರ, ಸಂಧ್ಯಾ ಪೂಜಾರಿ, ಜಯಶ್ರೀ ಪಾಟೀಲ, ಸುಮಾ ಹಡಪದ, ಐಶ್ವರ್ಯ ಬಂಡಿ, ಶಾರದಾ ರಾಯಚೂರ, ವಿವಿಧ ಮಹಿಳಾ ಮಂಡಳಗಳ ಸದಸ್ಯರು, ಇತರರು ಇದ್ದರು.
ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net