ಹಬ್ಬ, ಜಾತ್ರೆಗಳು ನಮ್ಮ ದೇಶದ ಸಂಸ್ಕೃತಿ

h25-tenginakai
Published on

ಹುಬ್ಬಳ್ಳಿ: ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಟ್ರಸ್ಟ್ ಹಾಗೂ ಶಿಕ್ಕಲಗಾರ ಸಮಾಜ ಸೇವಾ ಸಂಘದಿಂದ ಇಲ್ಲಿಯ ಜಗದೀಶ ನಗರದ ಹೆಗ್ಗೇರಿಯಲ್ಲಿ ಇತ್ತೀಚೆಗೆ ಶ್ರೀ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ಜರುಗಿತು.
ಶಾಸಕ ಮಹೇಶ ಟೆಂಗಿನಕಾಯಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿವರ್ಷ ಯಲ್ಲಮ್ಮ ಜಾತ್ರೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಕಮಿಟಿಯರು ಆಚರಿಸುತ್ತ ಬಂದಿದ್ದಾರೆ. ಹಬ್ಬ, ಜಾತ್ರೆ ನಮ್ಮ ದೇಶದ ಬಹುದೊಡ್ಡ ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದರಲ್ಲದೇ, ಜಗದೀಶನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು.
ಇದೇ ವೇಳೆ ವಿವಿಧ ಕಲಾ ತಂಡಗಳು ಹಾಗೂ ಕುಂಭಮೇಳದೊಂದಿಗೆ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ ಶಾಸಕರು, ಶ್ರೀ ರೇಣುಕಾಯಲ್ಲಮ್ಮ ದೇವಿಯ ಆಶೀರ್ವಾದ ಪಡೆದರು.
ಪ್ರಮುಖರಾದ ರಾಜು ಗುರುಸ್ವಾಮಿ, ಫಕೀರಪ್ಪ ಶ್ರಾವಣ, ಮಂಜುನಾಥ ಬ್ಯಾಡಗಿ, ಚನ್ನು ಹೊಸಮನಿ, ಪ್ರಕಾಶ ಬಿಲಾನಾ, ಹರೀಶ ಜಂಗ್ಲಿ, ಕಿಶನ ಬಿಲಾನಾ, ದುರ್ಗಪ್ಪ ಮುದ್ದಿ, ಸಂತೋಷ ವೆರ್ಣೇಕರ, ಸಂಜು ಜಂಗ್ಲಿ, ಅಶೋಕ ಕಟ್ಟಿಮನಿ, ಗೀತಾ ಮುದ್ದಿ, ಮಂಜುನಾಥ ಮುದ್ದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net