ಮೂರು ರಾಯರ ಉತ್ಸವ ಸಂಭ್ರಮ

07-01.MDL.01
Published on

ಮುದಗಲ್: ಪಟ್ಟಣದ ಚರ್ಚ್‌ನಲ್ಲಿ ಕ್ರೈಸ್ತರು ಮೂರು ರಾಯರ ಉತ್ಸವವನ್ನು ಶನಿವಾರ ಸಂಜೆ ಸಂಭ್ರಮದಿಂದ ಆಚರಿಸಿದರು.

ಕ್ರಿಸ್‌ಮಸ್ ಮುಗಿದ ಹದಿನೈದು ದಿನಗಳ ನಂತರ ಪಟ್ಟಣದಲ್ಲಿ ಮೂರುರಾಯರ ಉತ್ಸವ ಆಚರಿಸುವುದು ವಿಶೇಷ. ಚರ್ಚ್‌ನಲ್ಲಿರುವ ಮತ್ತು ಯೇಸುಕ್ರಿಸ್ತ ಪ್ರತಿಮೆಯನ್ನು ಅಲಂಕರಿಸಲಾಗಿತ್ತು. ಬೆಳಗ್ಗೆ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಟ್ರಾೃಕ್ಟರ್‌ದಲ್ಲಿ ಯೇಸುಕ್ರಿಸ್ತರ ಪ್ರತಿಮೆ ಪ್ರತಿಷ್ಠಾಪಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಕ್ಯಾಂಡೆಲ್ ಬೆಳಗಿಸಿ ಏಸುಕ್ರಿಸ್ತರ ಸಂದೇಶ ಸಾರಿದರು.

ಧರ್ಮಗುರುಗಳಾದ ಪನ್ನು ಸ್ವಾಮಿ, ಸುನಿಲ್, ದಾನಪ್ಪ, ಪಾಲನಾ ಸಮಿತಿ ಉಪಾಧ್ಯಕ್ಷ ಆರೋಗ್ಯಪ್ಪ ಕುರಿ, ಪುರಸಭೆ ಸದಸ್ಯ ದುರಗಪ್ಪ ಕಟ್ಟಿಮನಿ, ಸುನೀಲಕುಮಾರ ಕೋನಪಲ್ಲಿ, ಪ್ರೇಮಾ, ಆರೋಗ್ಯಮ್ಮ, ಅಶೋಕ್ ಬಾಟಿ, ಅಂತೋಣಿ ರಾಜ, ಜೋಸೆಫ್ ಈರ್ಲಾ, ಪೋಲರಾಜ ಎಮ್ಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net