ವೈಭವದ ವಿರೂಪಾಕ್ಷೇಶ್ವರ ಉತ್ಸವ

12 GJD1
Published on

ಗಜೇಂದ್ರಗಡ: ಶ್ರಾವಣ ಮಾಸದ ಕೊನೆಯ ಸೋಮವಾರ ಪಟ್ಟಣದ ಹಿರೇಬಜಾರದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಉತ್ಸವ ಸಕಲ ವಾದ್ಯ ವೈಭವಗಳೊಂದಿಗೆ ನೆರವೇರಿತು.

ಬೆಳಿಗ್ಗೆ ಶ್ರೀ ವಿರೂಪಾಕ್ಷೇಶ್ವರಸ್ವಾಮಿಗೆ ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ಮಹಾಪ್ರಸಾದದಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಸ್ವಾಮಿಯ ದರ್ಶನ ಪಡೆದದರು.

ಸಂಜೆ ರಥೋತ್ಸವವು ಸಕಲ ಸದ್ಭಕ್ತರೊಂದಿಗೆ ದೇವಸ್ಥಾನದಿಂದ ಹೊರಟು ಶ್ರೀ ಕಟ್ಟಿಬಸವೇಶ್ವರ ದೇವಸ್ಥಾನದ ವರೆಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮೆರವಣಿಗೆಯುದ್ದಕ್ಕೂ ವಿರೂಪಾಕ್ಷೇಶ್ವರ ಮಹಾರಾಜ್ ಕೀ ಜೈ ಎಂದು ಭಕ್ತರು ಜಯಘೋಷಣೆ ಹಾಕಿದರು. ಉತ್ತತ್ತಿ, ಬಾಳೆ ಹಣ್ಣು, ಕಬ್ಬು, ಉತ್ಸವಕ್ಕೆ ಎಸೆದು ಭಕ್ತಿ ಭಾವ ಮೆರೆದರು. ಕೆಲವು ಭಕ್ತರು ನೀರು ಹಾಕಿ ನಮಿಸಿದರು. ನೂರಾರು ಮಹಿಳೆಯರು ಕಳಸದೊಂದಿಗೆ, ಜಾಂಝಮೇಳ, ಡೊಳ್ಳು, ವಾದ್ಯಮೇಳಗಳು ನೆರೆದಿದ್ದ ಭಕ್ತ ಸಮೂಹದ ಆಕರ್ಷಣೆಯಾದವು. ದೇವಸ್ಥಾನದ ಹತ್ತಿರ ರಥ ಮರಳಿದಾಗ ಆಕಾಶದಲ್ಲಿ ಸಿಡಿಮದ್ದುಗಳನ್ನು ಹಾರಿಸುವ ಮೂಲಕ ಹರ್ಷವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net