

ಮಳಖೇಡ: ತೊನಸನಹಳ್ಳಿ (ಟಿ) ಗ್ರಾಮದಲ್ಲಿ ಶ್ರಾವಣ ಸಮಾರೋಪ ನಿಮಿತ್ತ ಸೋಮವಾರ ಸಂಭ್ರಮದಿAದ ಶ್ರೀ ಸಿದ್ಧೇಶ್ವರ ಪಲ್ಲಕ್ಕಿ ಉತ್ಸವ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. 10ಕ್ಕೆ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ದಾರಿಯುದ್ದಕ್ಕೂ ಭಕ್ತರು ಪಲಕ್ಕಿಗೆ ಕಾಯಿ, ಕರ್ಪೂರ ಅರ್ಪಿಸಿ ಭಕ್ತಿ ಮೆರೆದರು. ಪುರವಂತರ ರೌದ್ರಮಯ ಕುಣಿತ, ಹಲಗೆ, ಬಾಜಾ-ಭಜಂತ್ರಿಗಳ ಸದ್ದು, ಭಜನೆ ಗಮನಸೆಳೆಯಿತು. ರಾತ್ರಿಯಿಡೀ ಭಜನೆ ಕಾರ್ಯಕ್ರಮ ಜರುಗಿತು.
ಪ್ರಮುಖರಾದ ಬಸವರಾಜ ಸ್ವಾಮಿ ಹಿರೇಮಠ, ದಸ್ತಗೀರಸಾಬ್ ಮುತ್ಯಾ, ಶರಣಗೌಡ ಮಾಲಿಪಾಟೀಲ್, ಮಹೇಶ ದುಕಾನದಾರ, ಸಿದ್ದುಗೌಡ ಮಾಲಿಪಾಟೀಲ್, ಸಂತೋಷ ನಿಂಗದೆ, ಸಂತೋಷ ಸೂರಾರ, ಭೀಮರಾವ ಹಲಚೇರಿ, ಸಂಜು ಸೂರಾರ, ಅಶೋಕ ನಿಂಗದೆ, ಭೀಮಾಶಂಕರ ಗುಂಡಗುರ್ತಿ, ಹಣಮಂತರಾಯ ಯಾಕಾಪುರ, ಮಲ್ಲಿಕಾರ್ಜುನ ಗುಂಡಗುರ್ತಿ, ಸಿದ್ದು ಹಲಚೇರಿ, ವಿರೂಪಾಕ್ಷಪ್ಪ ಹದಗಲ್, ನಾಗರಾಜ ಯಾಕಾಪುರ, ಲಕ್ಷ್ಮಿಕಾಂತ ಅಂಕಲಗಿ ಇತರರಿದ್ದರು.