ಆಂಜನೇಯಸ್ವಾಮಿಯ ಉತ್ಸವ

IMG_20240122_153044
Published on

ನುಗ್ಗೇಹಳ್ಳಿ: ಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಸೋಮವಾರ ನುಗ್ಗೇಹಳ್ಳಿಯಲ್ಲಿ ಶ್ರೀ ಕಲ್ಯಾಣಿ ಆಂಜನೇಯ ಸ್ವಾಮಿಯ ಉತ್ಸವ ಜರುಗಿತು.

ಮುಂಜಾನೆಯಿಂದ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಬಳಿಕ ನೂರಾರು ಹನುಮ ಭಕ್ತರ ಜಯಘೋಷದ ನಡುವೆ ಪ್ರಮುಖ ಬೀದಿಗಳಲ್ಲಿ ಆಂಜನೇಯ ಮೂರ್ತಿಯ ಮೆರವಣಿಗೆ ಜರುಗಿತು. ಭಕ್ತರಿಗೆ ಪಾನಕ, ನೈವೇದ್ಯ ಪ್ರಸಾದ, ಅನ್ನದಾಸೋಹ ನಡೆಯಿತು.
ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಉದ್ಯಮಿಗಳಾದ ಎನ್.ಎಸ್. ಪ್ರಕಾಶ್, ಮರದ ಜಗದೀಶ್, ಬಾಣನಕೆರೆ ಅಶೋಕ್, ಗೋಮಾಂಜಿ, ಗ್ರಾಪಂ ಸದಸ್ಯ ಗೌಡಾಕಿ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಸ್.ಲಕ್ಷ್ಮಣ್, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net