ಮಂಠಾಳದಲ್ಲಿ ಶ್ರೀ ಗುರುಲಿಂಗೇಶ್ವರರ ಜಾತ್ರೆ ವೈಭವ

26BK4
ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಗ್ರಾಮದ ಆರಾಧ್ಯ ತಪೋಧನರಾದ ಶ್ರೀ ಗುರುಲಿಂಗೇಶ್ವರರ ಜಾತ್ರೋತ್ಸವ ನಿಮಿತ್ತ ಸೋಮವಾರ ಸಂಜೆ ಶ್ರೀ ಗುರುಲಿಂಗೇಶ್ವರರ ಪಲ್ಲಕ್ಕಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.
Published on

ಬಸವಕಲ್ಯಾಣ: ಮಂಠಾಳ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಗ್ರಾಮದ ಆರಾಧ್ಯ ತಪೋಧನರಾದ ಶ್ರೀ ಗುರುಲಿಂಗೇಶ್ವರರ ಜಾತ್ರೋತ್ಸವ ವೈಭವಪೂರ್ಣವಾಗಿ ಜರುಗಿತು. ಸೋಮವಾರ ಸಂಜೆ ಶ್ರೀ ಗುರುಲಿಂಗೇಶ್ವರರ ಪಲ್ಲಕ್ಕಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.

ಶ್ರೀಮಠದ ಪೀಠಾಧಿಪತಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಮಠದಿಂದ ಶ್ರೀ ಹನುಮಾನ, ಶ್ರೀ ಮಹಾದೇವ ಮಂದಿರ, ಶ್ರೀ ಅಂಬಾಭವಾನಿ, ಶ್ರೀ ಬಸವೇಶ್ವರ ಮಂದಿರದ ಮೂಲಕ ಮಠದವರೆಗೆ ಮುಖ್ಯರಸ್ತೆಯ ಮಾರ್ಗವಾಗಿ ತಾಳ, ಮೇಳ, ವಾದ್ಯಗಳೊಂದಿಗೆ ನಡೆದ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಜನಾ ತಂಡ, ಡೊಳ್ಳು ಕಲಾ ತಂಡ, ಲೇಜಿಮ್, ಕೋಲಾಟ ಸೇರಿ ಇತರ ಕಲಾ ತಂಡಗಳಿಂದ ನಡೆದ ಪ್ರದರ್ಶನ ಗಮನ ಸೆಳೆಯಿತು.

ಸಂಸದ ಸಾಗರ್ ಖಂಡ್ರೆ ಆಗಮಿಸಿ ದರ್ಶನ ಪಡೆದರು. ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್ ಮಂಠಾಳ, ಪ್ರಮುಖರಾದ ಶಿವಕುಮಾರ ಶಟಗರ್, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಮಹಾದೇವ ಪಾಟೀಲ್, ರವೀಂದ್ರ ಶಾಯಪ್ಪ, ಧನರಾಜ ಸತಾಭಾಯಿ ಮತ್ತು ಗ್ರಾಮದ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net