ಮಾ.15ರಿಂದ ಕಾಲಭೈರವೇಶ್ವರ ದೇವರ ಉತ್ಸವ: 23ರಂದು ಅಗ್ನಿಕೊಂಡೋತ್ಸವ

Festival of Lord Kalabhairaveshwara Mandya
Published on

ಮಂಡ್ಯ: ತಾಲೂಕಿನ ಬಸರಾಳು ಗ್ರಾಮದಲ್ಲಿ ಮಾ.15ರಿಂದ 23ರವರೆಗೆ ಇತಿಹಾಸ ಪ್ರಸಿದ್ಧ ಕಾಲಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ.

15ರಂದು ಉತ್ಸವಕ್ಕೆ ಚಾಲನೆ ಸಿಗಲಿದ್ದು, ಅಂದು ರಾತ್ರಿ 10 ಗಂಟೆಗೆ ದೇವಸ್ಥಾನದ ಬಳಿ ಹೊನ್ನಾರು ಕಟ್ಟುವ ಕಾರ್ಯಕ್ರಮ ನಡೆಯಲಿದೆ. 16ರಿಂದ 19ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯವಿರಲಿದೆ. 20ರಂದು ರಾತ್ರಿ 11ಗಂಟೆಗೆ ಕಾಲಭೈರವೇಶ್ವರ ಸ್ವಾಮಿ ಚಂದ್ರಮಂಡಲ ಉತ್ಸವ, 21ರಂದು ರಾತ್ರಿ 11 ಗಂಟೆಗೆ ಗರಿ ವಾಹನ ಉತ್ಸವ, 22ರಂದು ಇಡೀ ದಿನ ಧಾರ್ಮಿಕ ಕಾರ್ಯಕ್ರಮವಿರಲಿದೆ. 23ರಂದು ಮುಂಜಾನೆ ಏಳು ಜನ ದೇವರ ಗುಡ್ಡಪ್ಪ ಅಗ್ನಿಕೊಂಡ ಹಾಯಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net