ಕಲಘಟಗಿಯಲ್ಲಿ ದುಂಡಿ ಬಸವೇಶ್ವರ ದೇವರ ಉತ್ಸವ

Dundi Basaveshwar
Published on

ಕಲಘಟಗಿ: ಪಟ್ಟಣದ ದುಂಡಿ ಬಸವೇಶ್ವರ ದೇವರ ಉತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಮಹಾ ಮಂಗಳಾರತಿ, ಮಧ್ಯಾಹ್ನ ಭಕ್ತ ಸಮೂಹದಿಂದ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಕಲ್ಮೇಶ ಬೆಣ್ಣಿ, ಶಂಭು ಬಳಿಗೇರ, ಗಂಗಾಧರ ಗೌಳಿ, ಅಜ್ಜಯ್ಯ ಹುಬ್ಬಳ್ಳಿಮಠ, ಮಂಜು ಮುಳಗುಂದ, ವೀರಭದ್ರ ಹುಬ್ಬಳ್ಳಿಮಠ, ವಿಜಯ ಬೆಣ್ಣಿ, ಸಿದ್ದು ಬಳಿಗೇರ, ಪ್ರವೀಣ ಅಣ್ಣಿಗೇರಿ, ಶರಣಪ್ಪ ಮಣ್ಣಿಯವರ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net