ಆ,1ರಿಂದ 11ರವರೆಗೆ ಕೈಮಗ್ಗ ಸೀರೆಗಳ ಉತ್ಸವ

rathanakara indrali
Published on

ಉಡುಪಿ: ಪರ್ಯಾಯ ಪುತ್ತಿಗೆ ಮಠ ಹಾಗೂ ಕೃಷ್ಣ ಮಠದ ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಕೃಷ್ಣಮಠದ ರಾಜಾಂಗಣದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ -ಅಂಗವಾಗಿ ಆ. 1 ರಿಂದ 11ರವರೆಗೆ ಕೈಮಗ್ಗ ಸೀರೆಗಳ ಮೌಲ್ಯವರ್ಧನೆ ಮತ್ತು ಉನ್ನತಿಕರಣಕ್ಕಾಗಿ ಕೈಮಗ್ಗ ಸೀರೆಗಳ ಉತ್ಸವ -ಆಯೋಜಿಸಲಾಗಿದೆ ಎಂದು ಪದ್ಮಶಾಲಿ ನೇಕಾರ ಪ್ರತಿಷ್ಠಾನ ಅಧ್ಯಕ್ಷ ರತ್ನಾಕರ ಇಂದ್ರಾಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1 ರಂದು ಬೆಳಿಗ್ಗೆ 9.30ಕ್ಕೆ ಕೈಮಗ್ಗ ಸೀರೆಗೆಳ ಬ್ರಹತ್​ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಪುತ್ತಿಗೆ ಪೀಠಾಧೀಶ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ದಕ್ಷಿಣ ಭಾರತದ ವಿವಿಧ ಪ್ರದೇಶಗಳಿಂದ ಸುಮಾರು ಮೂವತ್ತಕ್ಕೂ ಅಧಿಕ ಕೈಮಗ್ಗ ಸೀರೆಗಳ ಉತ್ಪಾದಕರು ಮತ್ತು ಮಾರಾಟಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. 4ರಂದು ಬೆಳಗ್ಗೆ 9.30ಕ್ಕೆ ಕೈಮಗ್ಗ ಸೀರೆಗಳ ಉತ್ಸವದ ಅಂಗವಾಗಿ ಹಮ್ಮಿ ಕೊಳ್ಳಲಾಗುವ ಸಾಂಸತಿಕ ಮತ್ತು ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಹಾಗೂ ಅದಾನಿ ಸಮೂಹದ ದಣ ಭಾರತ ಉಪಾಧ್ಯಕ್ಷ ಕಿಶೋರ್​ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಸಾರ್ವಜನಿಕರಿಗಾಗಿ ಶ್ರೀಕೃಷ್ಣಲಿಲೋತ್ಸವ" -ಕೈಮಗ್ಗದ ಸೀರೆ ತೊಟ್ಟ ಗೋಪಿಕೆಯರೊಂದಿಗೆ ಮುದ್ದುಕೃಷ್ಣನ ಬಾಲ ಲೀಲೆಗಳನ್ನೊಳಗೊಂಡ ನೃತ್ಯ ರೂಪಕ ಆಯೋಜಿಸಲಾಗಿದೆ ಎಂದರು.

7ರಂದು ಕೈಮಗ್ಗ ದಿನಾಚರಣೆ
7ರಂದು ಬೆಳಗ್ಗೆ 9.30ಕ್ಕೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಉಡುಪಿ ಬ್ರಾಂಡ್​ ಲಿನನ್​ ಶರ್ಟಿಂಗ್​ ಅನಾವರಣ, ಉಡುಪಿ ಹ್ಯಾಂಡ್​ ಲೂಮ್​ ವರ್ಲ್ಡ್​ ಕೈಮಗ್ಗ ಪ್ರೀಮಿಯಂ ಸೀರೆಗಳ ಬಿಡುಗಡೆ, ನೇಕಾರ ಪೋಷಕ ಕೈಮಗ್ಗ ದಾನಿಗಳಿಗೆ ಗೌರವಾರ್ಪಣೆ, ಸಮರ್ಥ್​ ಕೇಂದ್ರ ಸರ್ಕಾರದ ನೇಕಾರ ಸೇವಾ ಕೇಂದ್ರ ಪ್ರಾಯೋಜಿತ ಕೈಮಗ್ಗ ತರಬೇತಿ ಕಾರ್ಯಾಗಾರದ ನೂತನ ಬ್ಯಾಚ್​ ಉದ್ಘಾಟನೆ, 20 ಮಹಿಳಾ ನೇಕಾರರಿಗೆ ಸುಮಾರು 2.50 ಲಕ್ಷ ರೂ. ಪ್ರೋತ್ಸಾಹ ಧನ ವಿತರಣೆ, ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಪ್ರಾಯೋಜಕತ್ವದಲ್ಲಿ ಎಸೆಸೆಲ್ಸಿ ಮತ್ತು ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ನೇಕಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಪರ್ಯಾಯ ಪುತ್ತಿಗೆ ಶ್ರೀಗಳು, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಶಾಸಕರಾದ ಧನಂಜಯ ಸರ್ಜಿ, ಸುನೀಲ್​ ಕುಮಾರ್​, ಗುರ್ಮೆ ಸುರೇಶ್​ ಶೆಟ್ಟಿ, ಗುರುರಾಜ್​ ಗಂಟಿಹೊಳೆ, ಮಾಜಿ ಶಾಸಕ ಕೆ. ರುಪತಿ ಭಟ್​ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.

10ರಂದು ಸೌಂದರ್ಯ ಸ್ಪರ್ಧೆ
10ರಂದು ಬೆಳಗ್ಗೆ 10ಕ್ಕೆ ತುಳುನಾಡ ವೈಭವ ಎನ್ನುವ ಶೀರ್ಷಿಕೆಯಲ್ಲಿ ಸಾರ್ವಜನಿಕರಿಗಾಗಿ ಕೈ ಮಗ್ಗ ಸೀರೆಗಳನ್ನುಟ್ಟು ವೈಯುಕ್ತಿಕ, ದಂಪತಿ, ತಂಡ ವಿಭಾಗಗಳಲ್ಲಿ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. 11ರಂದು ಬೆಳಗ್ಗೆ 9.30ಕ್ಕೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಮುಖ್ಯ ಅತಿಥಿಗಳಾಗಿರುವರು. ಆ. 4 ರಿಂದ 10ರವರೆಗೆ ಪ್ರತಿದಿನ ಸಾಯಂಕಾಲ 6 ಗಂಟೆಗೆ ಶಿಖರೋಪನ್ಯಾಸ ಮಾಲಿಕೆಯಲ್ಲಿ ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್​, ಉಪನ್ಯಾಸಕಿ ನಾಗಶ್ರೀ ತ್ಯಾಗರಾಜ್​, ಪತ್ರಕರ್ತ ಶ್ರೀಕಾಂತ್​ ಶೆಟ್ಟಿ ಕಾರ್ಕಳ, ಧಾರ್ಮಿಕ ಚಿಂತಕ ಎನ್​ ಆರ್​ ದಾಮೋದರ್​ ಶರ್ಮ ಬಾರ್ಕೂರು, ಉಪನ್ಯಾಕಿ ಅಕ್ಷಯ ಗೋಖಲೆ, ಕನ್ನಡ ಉಪನ್ಯಾಸಕ ಡಾ. ಅರುಣ್​ ಉಳ್ಳಾಲ್​, ಜ್ಞಾನಸುಧಾ ಶಿಕ್ಶಣ ಸಂಸ್ಥೆಗಳ ಅಧ್ಯಕ್ಷ ಡಾ.ಸುಧಾಕರ್​ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಉತ್ಸವ ಆಯೋಜನ ಸಮಿತಿ ಅಧ್ಯಕ್ಷ ಡಾ. ಚಂದನ್​ ಶೆಟ್ಟಿಗಾರ್​, ಕಾರ್ಯಾಧ್ಯಕ್ಷ ಮಂಜುನಾಥ ಮಣಿಪಾಲ, ಅವಿನಾಶ್​ ಶೆಟ್ಟಿಗಾರ್​, ಅಶೋಕ್​ ಶೆಟ್ಟಿಗಾರ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net