ಹೊರನಾಡಿನಲ್ಲಿ ಜಾತ್ರಾ ಮಹೋತ್ಸವ

3kls1
Published on

ಕಳಸ: ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು.

ಶುಕ್ರವಾರ ರಥೋತ್ಸವಾಂಗ ಶ್ರೀ ಗಣಪತಿ ಪೂಜೆ, ಶ್ರೀ ಗಣಪತಿ ಹೋಮ ಮತ್ತು ರಾತ್ರಿ ರಂಗ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಯಿತು. ಶನಿವಾರ ಮಧ್ಯಾಹ್ನ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಅವರ ಸಮ್ಮುಖದಲ್ಲಿ ಧ್ವಜಾರೋಹಣ ರಾತ್ರಿ ಪುಷ್ಪಕರೋಹಣ ನಡೆಯಿತು.

ಭಾನುವಾರ ಮಧ್ಯಾಹ್ನ 12.34 ರ ಅಭಿಜಿನ್ ಲಗ್ನದಲ್ಲಿ ಶ್ರೀಬ್ರಹ್ಮರಥೋತ್ಸವ, ರಾತ್ರಿ 10ಗಂಟೆಗೆ ಶ್ರೀಮನ್ ಮಹಾರಥೋತ್ಸವ ನಡೆಯಲಿದೆ. ಜಾತ್ರೆ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪ, ಹೂ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಸಂತೆ ಮಾರುಕಟ್ಟೆಗಳು ಲಗ್ಗೆ ಇಟ್ಟಿವೆ. ಸ್ಥಳೀಯ ಮತ್ತು ದೂರದೂರಿನ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಲಗ್ಗೆ ಇಡುತ್ತಿದ್ದಾರೆ. ಭಕ್ತಾದಿಗಳಿಗೆ ವಸತಿ, ಊಟೋಪಚಾರಗಳು, ಪಾರ್ಕಿಂಗ್, ಅಹಿತಕರ ಘಟನೆಗಳು ಯಾವುದೇ ರೀತಿಯ ತೊಂದರೆಗಳು ಆಗದಂತೆ ದೇವಸ್ಥಾನದ ಆಡಳಿತ ಮಂಡಳಿ ಕ್ರಮವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net