

ಹುಬ್ಬಳ್ಳಿ: ಹೋಳಿ ಹುಣ್ಣಿಮೆ ಮರು ದಿನವಾದ ಮಂಗಳವಾರ ನಗರದ ವಿವಿಧೆಡೆ ಯುವಕ-ಯುವತಿಯರು, ಮಕ್ಕಳು ಬಣ್ಣದಾಟವಾಡಿ ಸಂಭ್ರಮಿಸಿದರು.
ನಗರದ ಉಣಕಲ್, ನವನಗರ, ಅಮರಗೋಳ, ಅಯೋಧ್ಯೆ ನಗರ ಸೇರಿದಂತೆ ಕೆಲವೆಡೆ ಬಣ್ಣದಾಟ ನಡೆಯಿತು. ಬೆಳಗ್ಗೆ ಹೊರಗಡೆ ಬಂದ ಜನರು, ಪರಸ್ಪರ ಬಣ್ಣ ಎರಚಿದರು. ಕೆಲವೆಡೆ ರೇನ್ ಡ್ಯಾನ್ಸ್ ಮಾಡಿ ಸಂತಸ ಪಟ್ಟರು.
ಬೈಕ್ ಮೇಲೆ ಯುವಕರು-ಯುವತಿಯರು ಕೇಕೆ ಹಾಕುತ್ತ ತೆರಳಿ ದಾರಿ ಹೋಕರಿಗೆ ಬಣ್ಣ ಎರಚುತ್ತಿದ್ದರು. ಕೆಲವರು ಕಾಮಣ್ಣನ ಮೂರ್ತಿ ಮುಂದೆ ನಿಂತು ಜೋರಾಗಿ ಕೂಗು ಹಾಕುತ್ತಿದ್ದರು. ಕೆಲವೆಡೆ ರತಿ-ಮನ್ಮಥರನ್ನು ಸುಟ್ಟರು.