

ಐಮಂಗಲ: ಹೋಬಳಿಯ ಭರಂಪುರ ಗ್ರಾಮದ ಕೊಲ್ಲಾಪುರದಮ್ಮದೇವಿ ಹಾಗೂ ದುರ್ಗಾಂಬಿಕಾದೇವಿಯ ಕಡೆ ಕಾರ್ತಿಕ ಮಹೋತ್ಸವ ಈಚೆಗೆ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ತಿಕೋತ್ಸವ ಹಿನ್ನೆಲೆಯಲ್ಲಿ ಉತ್ಸವ ಮೂರ್ತಿಗಳನ್ನು ಕಲ್ಲತ್ತಗಿರಿಗೆ ಕೊಂಡೊಯ್ದು ಗಂಗಾ ಪೂಜೆ ನೆರವೇರಿಸಿ ತರಲಾಯಿತು. ದೇವಸ್ಥಾನದಲ್ಲಿ ವಿವಿಧ ಧಾರ್ವಿುಕ ಪೂಜಾ ಕೈಂಕರ್ಯಗಳು ನಡೆದು ಸಂಜೆ ಬಾಳೆ ಕಂದಿನಿಂದ ಕದಳಿ ಮಂಟಪ ನಿರ್ವಿುಸಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ಮಂಟಪವನ್ನು ಬಣ್ಣದ ಪುಷ್ಪಗಳು, ದೊಡ್ಡ ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರು ಹಣತೆ ಬೆಳಗಿ ಭಕ್ತಿ ಭಾವ ಮೆರೆದರು. ಕಾರ್ತಿಕ ದೀಪ ಬೆಳಗಿದ ನಂತರ ಮಹಾಮಂಗಳಾರತಿ ನಡೆಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಕಾರ್ತಿಕೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿವಿಧ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು, ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.