

ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ
ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿರುವ ಗಣಪನ ಮೂರ್ತಿಗಳ ಸಂರಕ್ಷಣೆ ಮತ್ತು ಸರಾಗ ವಹಿವಾಟಿಗೆ ತೊಡಕಾಗಿದೆ.
ಪ್ರತಿ ವರ್ಷದಂತೆ ಗಣೇಶನ ಹಬ್ಬಕ್ಕೆ ಮೂರ್ತಿಗಳ ಮಾರಾಟದಿಂದ ಒಳ್ಳೆಯ ಲಾಭ ಗಳಿಸುವ ನಿರೀೆಯಲ್ಲಿ ವ್ಯಾಪಾರಸ್ಥರು ಲಾಂತರ ರೂಪಾಯಿ ಬಂಡವಾಳ ಹೂಡಿ, ವ್ಯಾಪಾರದಲ್ಲಿ ತೊಡಗಿದ್ದರು. ಇದರ ನಡುವೆ ಆಗಾಗ ಮಳೆಯಿಂದಾಗಿ ವಹಿವಾಟು, ಮೂರ್ತಿಗಳ ಸಂರಕ್ಷಣೆಗೆ ಪರದಾಡುವಂತಾಗಿದೆ.
ಜಿಲ್ಲಾ ಕೇಂದ್ರದಲ್ಲಿನ ವಾಣಿ ಟಾಕೀಸ್ ಮುಂಭಾಗ, ಬೆಸ್ಕಾಂ ಕಚೇರಿ, ಸಂತೆ ಮಾರುಕಟ್ಟೆ, ಬಜಾರ್ ರಸ್ತೆ ಸೇರಿ ವಿವಿಧೆಡೆ
ಫುಟ್ಪಾತ್ಗಳಲ್ಲಿ ನಾನಾ ಬಗೆಯ ಮೂರ್ತಿಗಳನ್ನು ಇಟ್ಟುಕೊಂಡು ಪೈಪೋಟಿಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದ್ದು, ಗಣಪನನ್ನು ಪ್ರತಿಷ್ಠಾಪಿಸುವವರು ಇಷ್ಟ ಬಂದ ಮೂರ್ತಿಯನ್ನು ಖರೀದಿಸಲು ಮುಂದಾಗಿದ್ದರು.
ಗೋದಾಮು ದುಬಾರಿ ಬಾಡಿಗೆ: ಗಣಪನ ಮಾರಾಟಕ್ಕೆ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿರುವ ಕೆೆಲ ವ್ಯಾಪಾರಸ್ಥರು ಖಾಸಗಿ ಸ್ಥಳ, ಗೋದಾಮುಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದು, ವಹಿವಾಟಿನ ಅವಧಿ ಕಡಿಮೆ, ತಾತ್ಕಾಲಿಕ ಒಪ್ಪಂದದ ಹಿನ್ನೆಲೆಯಲ್ಲಿ ಮಾಲೀಕರು ದುಬಾರಿ ಹಣ ಕೇಳಿದರೂ ಅನಿವಾರ್ಯವಾಗಿ ಒಪ್ಪಿಕೊಂಡು ವಹಿವಾಟಿನಲ್ಲಿ ತೊಡಗಿದ್ದಾರೆ. ಇಲ್ಲಿ 10 ಅಡಿಯಿಂದ 15 ಅಡಿಯವರೆಗಿನ ಗಣಪನ ಮೂರ್ತಿಗಳ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಇದರ ನಡುವೆ ಸಣ್ಣ ಮತ್ತು ಮಧ್ಯಮದ ವ್ಯಾಪಾರಸ್ಥರು ಪ್ರತಿನಿತ್ಯ ರಸ್ತೆಬದಿಯಲ್ಲಿಟ್ಟಿರುವ ದೇವರ ಮೂರ್ತಿಗಳಿಗೆ ರಾತ್ರಿ ಮತ್ತು ಮಳೆ ಬೀಳುವ ಸಂದರ್ಭದಲ್ಲಿ ಸೂಕ್ಷ$್ಮ ಪ್ಲಾಸ್ಟಿಕ್ ಕವರ್ ಮತ್ತು ಟಾರ್ಪಾಲ್ ಹಾಕಿ, ಭದ್ರಪಡಿಸಿಕೊಳ್ಳುತ್ತಿದ್ದಾರೆ. ಬಿಸಿಲು ಬಂದಾಗ ತೆಗೆದು, ವ್ಯಾಪಾರ ನಡೆಸುತ್ತಿದ್ದಾರೆ.
ಮಳೆಯಿಂದ ಮೂರ್ತಿಗಳಿಗೆ ಧಕ್ಕೆ: ಆಗಾಗ ಜೋರು ಗಾಳಿ, ತುಂತುರು ಹನಿಗಳ ಸಿಂಚನ, ಇದ್ದಕ್ಕಿದ್ದಂತೆ ಧಾರಾಕಾರ ಮಳೆಯಿಂದಾಗಿ ಮೂರ್ತಿಗಳಿಗೆ ಧಕ್ಕೆಯಾಗುತ್ತಿದೆ. ಮೂರ್ತಿಗಳಿಗೆ ಬಳಸಿದ ಬಣ್ಣಗಳು ನೀರಿಗೆ ಚದುರುವಿಕೆ, ಸಣ್ಣ ಸಣ್ಣದಾಗಿ ಸೀಳುವಿಕೆ, ಗಟ್ಟಿಯಾಗಿರುವುದು ಮೆದುವಾಗುವಿಕೆ ಸೇರಿದಂತೆ ನಾನಾ ಸಮಸ್ಯೆಗಳು ಕಂಡು ಬರುತ್ತಿವೆ. ಇದಕ್ಕೆ ಮೂರ್ತಿಗಳ ತಯಾರಕರನ್ನು ಕರೆಸಿ, ತಾತ್ಕಾಲಿಕ ತೇಪೆ ಹಚ್ಚಿ ಸರಿಪಡಿಸುವ ಕೆಲಸದ ಹೊರೆ ಬೀಳುತ್ತಿದೆ. ಮತ್ತೊಂದೆಡೆ ಟಾರ್ಪಲ್ ತೆಗೆಯುವಿಕೆ, ಹಾಕುವಿಕೆಯು ವ್ಯಾಪಾರಸ್ಥರಿಗೆ ದೊಡ್ಡ ತಲೆ ನೋವಾಗಿದೆ. ಬೇಗ ಮೂರ್ತಿಗಳ ಮಾರಾಟವಾದರೆ ಸಾಕು ಎಂಬ ಮಾತನ್ನು ಹೇಳುತ್ತಿದ್ದಾರೆ.
ಸ್ಥಳಿಯವಾಗಿ ಖರೀದಿಸಿ ಹಂಚಿ: ಸಮಾಜ ಸೇವೆಯ ಮೂಲಕ ಜನರ ಒಲವು ಗಳಿಸುವ ಯೋಜನೆಯಲ್ಲಿ ಜನಪ್ರತಿನಿಧಿಗಳು, ನಾಯಕರು ಬೇರೆ ಎಲ್ಲಿಂದಲೋ ತರಿಸಿದ ಮೂರ್ತಿಗಳನ್ನು ಉಚಿತವಾಗಿ ವಿತರಿಸುವ ಬದಲು, ಸ್ಥಳಿಯವಾಗಿ ಖರೀದಿಸಿ ವಿತರಿಸಬೇಕೆಂಬುದು ಮಾರಾಟಗಾರರ ಒತ್ತಾಯವಾಗಿದೆ. ಕೆಲವೆಡೆ ಗಣಪ ಪ್ರತಿಷ್ಠಾಪನಾ ಸಮಿತಿಗಳು ಉಚಿತವಾಗಿ ಮೂರ್ತಿಗಳನ್ನು ಪಡೆಯುವ ನಿಟ್ಟಿನಲ್ಲಿ ಎದುರು ನೋಡುತ್ತಿವೆ. ಇದು ಬುಕ್ಕಿಂಗ್, ಖರೀದಿ ಪ್ರಕ್ರಿಯೆಯ ವಿಳಂಬಕ್ಕೆ ಕಾರಣವಾಗಿದೆ. ಈಗಾಗಲೇ ಲಾಂತರ ರೂ. ಬಂಡವಾಳ ಹೂಡಿ, ಮೂರ್ತಿಗಳ ಮಾರಾಟದ ಕೆಲಸದಲ್ಲಿ ತೊಡಲಾಗಿದೆ. ಕಳೆದ ಎರಡು ವರ್ಷ ಕರೊನಾ ಹಿನ್ನೆಲೆಯಲ್ಲಿ ಒಳ್ಳೆಯ ಲಾಭ ಸಿಗದೇ ನಷ್ಟ ಅನುಭವಿಸಂತಾಯಿತು. ಈ ಬಾರಿ ಉತ್ತಮ ವಹಿವಾಟು ನಡೆದಾಗ ಮುಂದಿನ ವರ್ಷದಲ್ಲೂ ಬಂಡವಾಳ ಹೂಡಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಬೇರೆ ವ್ಯಾಪಾರವನ್ನು ನೆಚ್ಚಿಕೊಳ್ಳಬೇಕಾಗುತ್ತದೆ ಎಂದು ವ್ಯಾಪಾರಸ್ಥರು ಅಳಲು ತೊಡಿಕೊಳ್ಳುತ್ತಿದ್ದಾರೆ.
ಏಕಗವಾ ವ್ಯವಸ್ಥೆ: ಸಾರ್ವಜನಿಕ ಸ್ಥಳಗಳಲ್ಲಿ ಗಣಪನ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ವಿವಿಧ ಇಲಾಖೆಯ ಕಚೇರಿಗಳಿಗೆ ಅಲೆದು ಹೈರಾಣದ ಸಮಿತಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಜಿಲ್ಲಾ ಕೇಂದ್ರದಲ್ಲಿ ಅರ್ಜಿ ಸ್ವೀಕಾರಕ್ಕೆ ಪೊಲೀಸ್ ಇಲಾಖೆಯು ಏಕಗವಾ ವ್ಯವಸ್ಥೆಯನ್ನು ಕೈಗೊಂಡಿದೆ. ಇಲ್ಲಿನ ವೃತ್ತ ಪೊಲೀಸ್ ಕಚೇರಿಯಲ್ಲಿ ಸಮರ್ಪಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೂ ಮೊದಲು ನಗರಸಭೆ, ಬೆಸ್ಕಾಂ, ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳು ಅರ್ಜಿ ಸ್ವೀಕಾರ, ಅನುಮತಿ ನೀಡುವಿಕೆ ಜವಾಬ್ದಾರಿಯಿಂದ ಪರಸ್ಪರ ನುಣುಚಿಕೊಂಡು ಸತಾಯಿಸುತ್ತಿದ್ದವು. ಇದಕ್ಕೆ ಸಮಿತಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಸೂಕ್ತ ವ್ಯವಸ್ಥೆ ಒದಗಿಸಲಾಗಿದೆ.
ಸಾರ್ವಜನಿಕರ ಅನುಕೂಲಕರ ದೃಷ್ಟಿ ಮತ್ತು ಸುಲಲಿತವಾಗಿ ಗಣೇಶ ಪ್ರತಿಷ್ಠಾಪನೆಯ ಅನುಮತಿ ಪರಿಶೀಲಿಸಿ ನೀಡುವ ಉದ್ದೇಶದಿಂದ ಸ್ಥಳಿಯ ವೃತ್ತ ಪೊಲೀಸ್ ಕಚೇರಿಯಲ್ಲಿ ಏಕಗವಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಲ್ಲಿ ಸಂಬಂಧಪಟ್ಟವರು ಸಮರ್ಪಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.ವಾಸುದೇವ್, ಡಿವೈಎಸ್ಪಿ
ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದಕ್ಕೆ ಮಾರಾಟಕ್ಕಿಟ್ಟಿರುವ ಗಣಪನ ಮೂರ್ತಿಗಳನ್ನು ಸಂರಸಿಕೊಳ್ಳುವುದು ಮತ್ತು ಉತ್ತಮ ವಹಿವಾಟು ನಡೆಸಲು ತೊಂದರೆಯಾಗುತ್ತಿದೆ.ನಾಗರಾಜಪ್ಪ, ಗಣಪನ ಮೂರ್ತಿಗಳ ಮಾರಾಟಗಾರ