

ಬೈಂದೂರು: ವಿದ್ಯಾರ್ಥಿಗಳು ಸಂತಸದಿಂದ ಸಂಭ್ರಮಿಸಲು ಕ್ರೀಡೋತ್ಸವಗಳು ಸಹಕಾರಿಯಾಗುತ್ತದೆ. ಎಲ್ಲರೂ ಒಟ್ಟಾಗಿ ಕಲೆತು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಇಂತಹ ಉತ್ಸವಗಳು ಮಕ್ಕಳಲ್ಲಿ ಏಕತಾ ಭಾವನೆ ಮೂಡಿಸುತ್ತದೆ ಎಂದು ಬೈಂದೂರು ಪಿಎಸ್‌ಐ ನವೀನ್ ಬೋರ್ಕರ್ ಹೇಳಿದರು.
ಯಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಆಚರಣೆ ಪ್ರಯುಕ್ತ ಶನಿವಾರ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ವೈ.ಮಂಗೇಶ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಕೆಎಂಸಿ ದಂತವೈದ್ಯ ತಜ್ಞರಿಂದ ಶಾಲಾ ಮಕ್ಕಳಿಗೆ ಉಚಿತ ದಂತ ತಪಾಸಣಾ ಶಿಬಿರ ನಡೆಯಿತು. ಉದ್ಯಮಿ ವಸಂತ್ ಪಡಿಯಾರ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿದರು. ಜ.24, 25ರಂದು ನಡೆಯುವ ಶತಮಾನೋತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.
ಗೊಳಿಹೊಳೆ ಗ್ರಾಪಂ ಸದಸ್ಯ ಶ್ರೀಕಾಂತ ಪೂಜಾರಿ, ಪಿಡಿಒ ಮಾಧವ ದೇವಾಡಿಗ, ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ರಾಮಕೃಷ್ಣ ದೇವಾಡಿಗ, ಮಂಜುನಾಥ ದೇವಾಡಿಗ, ದೈಶಿಶಿ ವಾಸು ಗಾಣಿಗ, ಸದಾಶಿವ ಶೆಟ್ಟಿ ಇದ್ದರು. ಮುಖ್ಯ ಶಿಕ್ಷಕಿ ಪದ್ಮಾವತಿ ಕಾರ್ಯಕ್ರಮ ನಿರ್ವಹಿಸಿದರು.
ಆರೋಗ್ಯವೇ ಭಾಗ್ಯ ಎಂಬ ನೆಲೆಯಲ್ಲಿ ಪ್ರಾಚೀನ ಕಾಲದಿಂದಲೂ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕ್ರೀಡೆಯು ನಮಗೆ ಸಮಯಪ್ರಜ್ಞೆಯ ಜತೆಗೆ ಸಮನ್ವಯ ಜೀವನದ ಪಾಠ ಕಲಿಸುತ್ತದೆ. ಯಶಸ್ಸು ಸುಲಭವಲ್ಲ. ಇದಕ್ಕಾಗಿ ನಿರಂತರ ಪ್ರಾಮಾಣಿಕ ಪ್ರಯತ್ನವೂ ಅಗತ್ಯ. -ನವೀನ್ ಬೋರ್ಕರ್, ಪಿಎಸ್‌ಐ ಬೈಂದೂರು https://www.vijayavani.net/bharatanatyam-junior-grade-examination https://www.vijayavani.net/guidance-from-elders-role-models