10ಕ್ಕೆ ಭಗೀರಥ ಶ್ರೀ 22 ನೇ ಪಟ್ಟಾಧಿಕಾರ ಮಹೋತ್ಸವ: ಮುಖ್ಯಮಂತ್ರಿಗೆ ಆಹ್ವಾನ

HSD C.M.Beti 01 file-3
Published on

ಹೊಸದುರ್ಗ: ತಾಲೂಕಿನ ಭಗೀರಥ ಗುರುಪೀಠದಲ್ಲಿ ಫೆ. 10ರಂದು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಆಹ್ವಾನಿಸಿದರು.

ಬೆಂಗಳೂರಿನಲ್ಲಿ ಶನಿವಾರ ಭೇಟಿ ಮಾಡಿ ಆಹ್ವಾನಿಸಿದ ಶ್ರೀಗಳು, ಭಗೀರಥ ಗುರುಪೀಠದಲ್ಲಿ ಫೆ. 10ರಂದು 22ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಭಗೀರಥ ಮಹರ್ಷಿ ದೇವಾಲಯ, ಲೇಪಾಕ್ಷಿ ಮಂದಿರ ಹಾಗೂ ಅನ್ನಪೂರ್ಣೆಶ್ವರ ಪ್ರಸಾದ ನಿಲಯದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.

ಶಾಸಕ ಗೂಳಿಹಟ್ಟಿ ಡಿ.ಶೇಖರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ, ಉಪ್ಪಾರ ಸಂಘದ ತಾಲೂಕಾಧ್ಯಕ್ಷ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net