

ನಾಲತವಾಡ: ಪಟ್ಟಣದಲ್ಲಿ ಮುಸ್ಲಿಮರು ಸೋಮವಾರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸದರು.
ಬೆಳಗ್ಗೆ ಹಲವಾರು ಮುಸ್ಲಿಮರು ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಾಫೀಜ್ ಅಲ್ಲಾಭಕ್ಷ ಖಾಜಿ ಧಾರ್ಮಿಕ ಉಪನ್ಯಾಸ ನೀಡಿದರು.
ಮೈನುದ್ದೀನ್ ಖಾಜಿ ನೇತೃತ್ವ ವಹಿಸಿದ್ದರು. ಬಳಿಕ ಅಗಲಿದ ತಮ್ಮ ಪೂರ್ವಜರ ಸಮಾಧಿಗೆ ತೆರಳಿ ಸ್ಮರಿಸಿದರು. ಬಡವರಿಗೆ ದಾನ ಮಾಡಲಾಯಿತು. ಪಟ್ಟಣ ಸೇರಿ ಅಯ್ಯನಗುಡಿ, ಬಿಜ್ಜೂರ, ಆಲೂರ, ವೀರೇಶನಗರ, ನಾಗಬೇನಾಳ, ಲೊಟಗೇರಿ, ಆಲೂರ ಗ್ರಾಮದ ಮುಸ್ಲಿಮರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.
ಹಬ್ಬದ ನಿಮಿತ್ತ ಪ್ರತಿಯೊಬ್ಬರೂ ಹೊಸ ಬಟ್ಟೆ ಧರಿಸಿದ್ದರು. ಪರಸ್ಪರ ಶುಭಾಶಯ ವಿನಿಮಯಿಸಿಕೊಂಡರು. ಮನೆಯಲ್ಲಿ ಸುರಕುಂಬಾ ಸಿದ್ಧಪಡಿಸಿ ತಮ್ಮ ಸಂಬಂಧಿಗಳಿಗೆ ಹಾಗೂ ಸ್ನೇಹಿತರನ್ನು ಕರೆದು ಸಿಹಿ ಕುಡಿಸಿ ಸಂಭ್ರಮಿಸಿದರು.
ಯುವಕರು ಬೈಕ್ ರ‌್ಯಾಲಿ ನಡೆಸಿ ಸಂಭ್ರಮಿಸಿದರು.