ರಾಗಿಮುದ್ದನಹಳ್ಳಿಯಲ್ಲಿ ಬಿಸಿಲು ಮಾರಮ್ಮನಿಗೆ ಪೂಜೆ: ಹರಕೆ ತೀರಿಸಿದ ಅಪಾರ ಪ್ರಮಾಣದ ಭಕ್ತರು

Festival celebration at Ragimuddanahalli mandya
Published on

ಮಂಡ್ಯ: ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಬಿಸಿಲು ಮಾರಮ್ಮ ದೇವಿಯ ಪೂಜಾ ಮಹೋತ್ಸವ ಸಂಭ್ರಮ ಸಡಗರದಿಂದ ನಡೆಯಿತು.

ಗ್ರಾಮದ ಮಹಿಳೆಯರು ಪೂಜಾ ಸಾಮಾಗ್ರಿ ಇರುವ ತಂಬಿಟ್ಟು ಆರತಿ ಸಮೇತವಿರುವ ಬುಟ್ಡಿಯನ್ನು ತಲೆ ಮೇಲೆ ಹೊತ್ತುಕೊಂಡು ಗ್ರಾಮದ ಹೊರವಲಯದ ಜಮೀನಿನಲ್ಲಿ ಸಂಪ್ರದಾಯದಂತೆ ದೇವಿಗೆ ಪೂಜೆ ನೆರವೇರಿಸಲಾಯಿತು. ಹರಕೆ ಮರಿ ಹಾಗೂ ಕೋಳಿಗಳನ್ನು ತಂದು ದೇವಿಗೆ ಒಪ್ಪಿಸಿದರು. ಬಾಳೆ ಹಣ್ಣುಗಳು ಹಾಗೂ ಕಬ್ಬಿನ ಸೀಳುಗಳನ್ನು ಬಾನೆತ್ತರಕ್ಕೆ ಎಸೆಯುವ ಮೂಲಕ ಭಕ್ತಿ ಮೆರೆಯಲಾಯಿತು. ಜತೆಗೆ ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳು ಹಬ್ಬದ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net