ಕಾರಿಂಜೇಶ್ವರ ದೇವಸ್ಥಾನದಲ್ಲಿ ಉತ್ಸವ

33
Published on

ಬಂಟ್ವಾಳ: ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಸೌರಮಾನ ಯುಗಾದಿ ಉತ್ಸವ ಸೋಮವಾರ ನಡೆಯಿತು.

ಬೆಳಗ್ಗೆ ಸನ್ನಿಧಿಯಲ್ಲಿ ಪರಮೇಶ್ವರ ದೇವರ ಬಲಿ ಉತ್ಸವ ಬಳಿಕ ದೇವರ ಉತ್ಸವ ಬಲಿ ಮೂರ್ತಿ ಕಾರಿಂಜಬೆಟ್ಟದಿಂದ ಕೆಳಗೆ ಇಳಿದು ಪಾರ್ವತಿ ಸನ್ನಿಧಿಗೆ ಆಗಮಿಸಿತು. ಪಾರ್ವತಿ ಸನ್ನಿಧಿಯಲ್ಲಿ ಪೂಜೆ ಬಳಿಕ ವಸಂತ ಮಂಟಪದಲ್ಲಿ ಪಾರ್ವತಿ ದೇವಿ ಸಹಿತ ಕಾರಿಂಜೇಶ್ವರನಿಗೆ ಪೂಜೆ ನಡೆಯಿತು. ನಂತರ ಪಾರ್ವತಿ - ಪರಮೇಶ್ವರ ಜತೆಗೂಡಿ ರಥಾರೂಢರಾಗಿ ರಥೋತ್ಸವ ನಡೆಯಿತು. ವಸಂತೋತ್ಸವ ಮತ್ತು ಪಂಚಾಂಗ ಶ್ರವಣ ನಡೆಯಿತು.

ಅರ್ಚಕರಾದ ಜಯಶಂಕರ ಉಪಾಧ್ಯಾಯ ಹಾಗೂ ಮಿಥುನ್ ರಾಜ್ ನಾವಡ ಮತ್ತು ಪುರೋಹಿತರಾದ ಬಾಲಕೃಷ್ಣ ಆಚಾರ್ಯ, ರಾಧಾಕೃಷ್ಣ ಮಯ್ಯ, ಪ್ರಭಾಕರ ಆಚಾರ್ಯ, ಮಹೇಶ್ ಮಯ್ಯ ಸಹಕಾರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಕೆ.ಎಲ್.ಆಚಾರ್ಯ ಹಾಗೂ ಯತಿರಾಜ ಆಚಾರ್ಯ ಬಳಗದವರು ಪಂಚಾಂಗ ಶ್ರವಣ ನೆರವೇರಿಸಿದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಶೆಟ್ಟಿ, ಜಿಪಂ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಗ್ರಾಮಣಿಗಳಾದ ಗಣೇಶ ಮುಚ್ಚಿನ್ನಾಯ, ವೆಂಕಟರಾಜ ಎಳಚಿತ್ತಾಯ, ಲಕ್ಷ್ಮೀನಾರಾಯಣ ಆಚಾರ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರೇಂದ್ರ ಕುಮಾರ್ ಅಮೀನ್, ಮಾಜಿ ಅಧ್ಯಕ್ಷರಾದ ಪಿ.ಜಿನರಾಜ ಆರಿಗ, ಶಿವಪ್ಪ ಗೌಡ ನಿನ್ನಿಕಲ್ಲು, ಬಂಟ್ವಾಳ ತಾಪಂ ಇಒ ಸಚಿನ್ ಕುಮಾರ್, ಕಾವಳಪಡೂರು ಗ್ರಾಪಂ ಅಧ್ಯಕ್ಷ ಲಕ್ಷ್ಮೀನಾರಾಯಣ ಶರ್ಮ, ಕಾವಳಮೂಡೂರು ಗ್ರಾಪಂ ಅಧ್ಯಕ್ಷ ಅಜಿತ್ ಶೆಟ್ಟಿ ಕಾರಿಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಶಾಂತ್, ರಾಧಾ ಆಚಾರ್ಯ, ಧನಲಕ್ಷ್ಮೀ ಸಿ.ಬಂಗೇರ, ಎಂ.ಉದಯ ನಾಯಕ್, ಪ್ರೇಮನಾಥ ಪೀರ್ಯಗುತ್ತು, ಜನಾರ್ದನ ಆಚಾರ್ಯ, ದಯಾನಂದ ಶೆಟ್ಟಿ ಅಮೈ, ಮ್ಯಾನೇಜರ್ ವಿನಯ ಕುಮಾರ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net