ಏ.17,18 ಪನ್ನಂಗಾಲ ದೇವಿಯ ವಾರ್ಷಿಕೋತ್ಸವ

fest
Published on

ಮಡಿಕೇರಿ:

ಕಾಂತೂರು-ಮೂರ್ನಾಡು ಶ್ರೀ ಪನ್ನಂಗಾಲ ದೇವಿಯ ವಾರ್ಷಿಕೋತ್ಸವ ಏ.17 ಮತ್ತು 18 ರಂದು ನಡೆಯಲಿದೆ. ಏ.17 ರಂದು ಬೆಳಗ್ಗೆ ದೇವರ ಶುದ್ಧ ಕಳಸ ಪೂಜೆ, ಕೆರೆ ಮನೆಯಿಂದ ಭಂಡಾರ ತರುವುದು, ಎತ್ತು ಪೋರಾಟ, ದೇವರ ದರ್ಶನ ಹಾಗೂ ಸಂಜೆ 7 ಗಂಟೆಗೆ ಕುರುಂದ ಭಾರಣಿ ಜರುಗಲಿದೆ.

ಏ.18 ರಂದು ಬೆಳಗ್ಗೆ ದೇವರ ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಚಾಮುಂಡಿ ಉತ್ಸವ, ಕುರುಂದಾಟ ದೇವರ ಜಳಕ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷರು ಹಾಗೂ ತಕ್ಕ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net