ಶ್ರೀ ನಂಜು0ಡೇಶ್ವರ ವಾರ್ಷಿಕ ಉತ್ಸವ

fest
Published on

ಕುಶಾಲನಗರ:

ಕುಶಾಲನಗರ ತಾಲೂಕು ನಂಜರಾಯಪಟ್ಟಣದಲ್ಲಿ ಸುತ್ತಲಿನ ಹಲವು ಗ್ರಾಮಗಳ ಮುಖ್ಯ ದೈವ ಶ್ರೀ ನಂಜುAಡೇಶ್ವರ ಹಾಗೂ ದೇವೀರಮ್ಮ ದೇವರ ವಾರ್ಷಿಕ ಪೂಜೋತ್ಸವ ಸೋಮವಾರದಿಂದ ಎರಡು ದಿನಗಳ ಕಾಲ ನೆರವೇರಿತು. ಸೋಮವಾರ ಸಂಜೆಯಿAದ ಆರಂಭವಾದ ಪೂಜೋತ್ಸವ ಮಂಗಳವಾರ ದೇವತಾ ಮೂರ್ತಿಗಳ ಭವ್ಯ ಮೆರವಣಿಗೆಯೊಂದಿಗೆ ಸಂಪನ್ನಗೊAಡಿತು.

ಮಂಗಳವಾರ ಬೆಳಗ್ಗೆ ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ ನೆರವೇರಿಸಿ ಮಂಟಪಗಳಲ್ಲಿ ಕನ್ನಂಬಾಡಮ್ಮ ಹಾಗೂ ಬಸವೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನದಿಯಿಂದ ದೇವಾಲಯದವರೆಗೂ ವಿವಿಧ ಪೂಜೆ ಹಾಗೂ ವೀರಭದ್ರ ಕುಣಿತಗಳೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಮಧ್ಯಾಹ್ನ ಆಗಮಿಸಿತು.

ನಂತರ ದೇವಾಲಯದ ಗರ್ಭಗುಡಿಯ ಪ್ರಾಂಗಣ ಹಾಗೂ ದೇವತಾ ಮೂರ್ತಿಗಳನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ದಿಂಡಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರಪೇಟೆಯ ಯೋಗೇಶ್ ಹಾಗೂ ದೇವಾಲಯದ ಅರ್ಚಕ ಅಣ್ಣಪ್ಪ ಅವರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಮೈಸೂರಿನ ಮಂಜು, ಯಡಿಯೂರು ಬಾಬು ಅವರ ವೀರಭದ್ರ ವೀರಗಾಸೆ ಹಾಗೂ ಯಡಿಯೂರು ಪ್ರಜ್ವಲ್ ಅವರು ಮಹಾಕಾಳ ಅಘೋರಿಯ ವೇಷಧಾರಿಯಾಗಿ ಭಕ್ತರ ಗಮನಸೆಳೆದರು.

ದೇವಾಲಯ ಸಮಿತಿ ಅಧ್ಯಕ್ಷ ಎನ್.ಕೆ. ಮೋಹನಕುಮಾರ್, ಉಪಾಧ್ಯಕ್ಷ ಕೆ.ಜಿ. ಲೋಕನಾಥ್, ಕಾರ್ಯದರ್ಶಿ ಕೆ.ವಿ. ಪ್ರೇಮಾನಂದ, ಸಹಕಾರ್ಯದರ್ಶಿ ಕೆ.ಎಸ್. ರತೀಶ್, ಖಜಾಂಚಿ ಬಿ.ಸಿ. ಮುರಳಿ ಮಾದಯ್ಯ, ನಿರ್ದೇಶಕರಾದ ಟಿ.ಕೆ. ರಘು, ಕೆ.ಸಿ. ಕಾರ್ಯಪ್ಪ, ಆಶಿಷ್ ಅಪ್ಪಣ್ಣ, ಕೆ.ಸಿ. ಕಾಳಯ್ಯ, ಲೀಲಾವತಿ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net