ರಸಗೊಬ್ಬರ ಸಬ್ಸಿಡಿ ಕಡಿತ

1 kmp 04
ವಿ.ಎಸ್.ಶಿವಶಂಕರ್
Published on

ಕಂಪ್ಲಿ: ಬಡವರ ವಿರೋಧಿಯಾಗಿರುವ ಕೇಂದ್ರ ಸರ್ಕಾರದ ಬಜೆಟ್ ಪ್ರತಿಯನ್ನು ಫೆ.5ರಂದು ಕಂಪ್ಲಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸುಟ್ಟು ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ ತಿಳಿಸಿದರು.

ಬಜೆಟ್‌ನಲ್ಲಿ ಕೃಷಿಕರನ್ನು ಕಡೆಗಣಿಸಲಾಗಿದೆ. ಎಂ.ಎಸ್.ಪಿ, ಕೃಷಿ ಉತ್ಪನ್ನಗಳ ಖರೀದಿ ವಿಸ್ತರಣೆ ಕುರಿತು ಪ್ರಸ್ತಾಪಿಸಿಲ್ಲ. ರೈತರನ್ನು ಸಾಲಬಾಧೆಯಿಂದ ಮುಕ್ತಗೊಳಿಸುವ, ಲಾಭದಾಯಕ ಬೆಲೆಗಳನ್ನು ಖಚಿತಪಡಿಸುವ ಸಂಸದೀಯ ಸ್ಥಾಯಿಸಮಿತಿ ಶಿಫಾರಸು ಪಾಲಿಸಿಲ್ಲ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಬೆಳೆ ವಿಮೆಗೆ ನೀಡಲಾದ 15,864 ಕೋಟಿ ರೂ. ಹಣದಿಂದ 12,242.27 ಕೋಟಿ ರೂ. ಗಳಿಗೆ ಕಡಿತಗೊಳಿಸಿದೆ. ಧನ್‌ಧಾನ್ಯ ಕೃಷಿ ಯೋಜನೆಗೆ ಪ್ರತ್ಯೇಕ ಅನುದಾನ ಒದಗಿಸಿಲ್ಲ.

ರಸಗೊಬ್ಬರ ಸಬ್ಸಿಡಿಯನ್ನು 171298.50 ಕೋಟಿ ರೂ.ಗಳಿಂದ 167887.20 ಕೋಟಿರೂ.ಗಳಿಗೆ ಕಡಿತಗೊಳಿಸಿದೆ. ಗ್ರಾಮೀಣ ಪ್ರದೇಶದ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಹಂಚಿಕೆಯಲ್ಲಿ ಹೆಚ್ಚಳವಾಗಿಲ್ಲ. ಒಟ್ಟಾರೆಯಾಗಿ ಕೇಂದ್ರ ಬಜೆಟ್ ಕಾರ್ಪೋರೇಟ್ ಪರವಾಗಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net