ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ* ಕೃಷಿ ಅಧಿಕಾರಿಗಳಿಂದ ದಾಸ್ತಾನು ಪರಿಶೀಲನೆ

KGL
Published on

ಕಲಘಟಗಿ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ (ಮಾರ್ಕೆಟಿಂಗ್ ಸೊಸೈಟಿ) ಸಂಘಕ್ಕೆ ಜಂಟಿ ಕೃಷಿ ನಿರ್ದೇಶಕರ ಸೂಚನೆ ಮೇರೆಗೆ ಸಹಾಯಕ ಕೃಷಿ ನಿರ್ದೇಶಕ ಅಮರ ನಾಯಕ ಭಾನುವಾರ ಭೇಟಿ ನೀಡಿ ನೋಟಿಸ್ ಜಾರಿ ಮಾಡಿ, ಗೊಬ್ಬರಗಳ ದಾಸ್ತಾನು ಬಗ್ಗೆ ಮಾಹಿತಿ ಪಡೆದುಕೊಂಡರು.

ಮಾರ್ಕೆಟಿಂಗ್ ಸೊಸೈಟಿಯಲ್ಲಿ ಯೂರಿಯಾ ಗೊಬ್ಬರವನ್ನು ಹೆಚ್ಚಿನ ಬೆಲೆ ಮಾರಾಟ ಮಾಡುತ್ತಿದ್ದಾರೆ ಎಂಬ ರೈತರ ಆರೋಪದ ಹಿನ್ನೆಲೆಯಲ್ಲಿ ಜುಲೈ 20ರಂದು ‘ವಿಜಯವಾಣಿ’ ಯೂರಿಯಾಗೆ ಹೆಚ್ಚಿನ ಹಣ ವಸೂಲಿ ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು, ವರದಿಯಿಂದ ಎಚ್ಚೆತ್ತುಕೊಂಡು ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರ ನಿಯಂತ್ರಣ ಆದೇಶ ಉಲ್ಲಂಘನೆ ಮಾಡಿರುವ ಕುರಿತು ನೋಟಿಸ್ ಜಾರಿಗೊಳಿಸಿದ್ದಾರೆ.

ಕಚೇರಿ ಸಿಬ್ಬಂದಿ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ರೈತರು ನೀಡಿದ ದೂರಿನಲ್ಲಿ ಸತ್ಯ ಇರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯ ವಿ.ಪಿ. ಪಟ್ಟಣಶೆಟ್ಟಿ, ಸಿಬ್ಬಂದಿ ಬಸನಗೌಡ, ಕಲ್ಮೇಶ ಹನುಮಣ್ಣವರ, ಕೃಷಿ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net