ರಸಗೊಬ್ಬರ ಮಳಿಗೆ ಮಾಲೀಕನಿಗೆ ನೋಟಿಸ್

4gok3-Web
ಮಮದಾಪುರ ಗ್ರಾಮದ ಲಕ್ಷ್ಮೀ ಟ್ರೇಡರ್ಸ್ ರಸಗೊಬ್ಬರ ಮಳಿಗೆ ಮೇಲೆ ಕೃಷಿ ಇಲಾಖೆಯ ಚಿಕ್ಕೋಡಿ ವಿಭಾಗದ ಉಪನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
Published on

ಗೋಕಾಕ: ಜಿಲ್ಲಾಧಿಖಾರಿಗೆ ರೈತರ ದೂರಿನ ಹಿನ್ನೆಲೆಯಲ್ಲಿ ತಾಲೂಕಿನ ಮಮದಾಪುರ ಗ್ರಾಮದ ಲಕ್ಷ್ಮೀ ಟ್ರೇಡರ್ಸ್ ರಸಗೊಬ್ಬರ ಮಳಿಗೆ ಮೇಲೆ ಕೃಷಿ ಇಲಾಖೆಯ ಚಿಕ್ಕೋಡಿ ವಿಭಾಗದ ಉಪನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿದೆ.

ಅಧಿಕಾರಿಗಳು ಅಂಗಡಿಯ ದಾಸ್ತಾನು ಮತ್ತು ದಾಖಲೆ ಪರಿಶೀಲನೆ ನಡೆಸಿದರು. ಯೂರಿಯಾ ಹಾಗೂ ರಸಗೊಬ್ಬರಗಳಿಗೆ ಹೆಚ್ಚಿನ ದರ ನಿಗದಿ, ಪರವಾನಗಿ ಇಲ್ಲದ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಖರೀದಿಸಿದ ರೈತರಿಗೆ ರಶೀದಿ ನೀಡದೇ ಇರುವುದೂ ಸಹ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಳಿಗೆ ಮಾಲೀಕನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡುವವರಗೆ ಕೃಷಿ ಪರಿಕರಗಳ ಮಾರಾಟ ಮಾಡದಂತೆ ತಿಳಿಸಲಾಗಿದೆ ಎಂದು ಉಪನಿರ್ದೇಶಕ ಎಲ್.ಐ. ರೂಡಗಿ ತಿಳಿಸಿದ್ದಾರೆ. ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ. ನದಾಫ್, ಆರ್.ಬಿ. ಪಾಟೀಲ, ಸಿ.ಐ. ಹೂಗಾರ, ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ ಇತರರು ದಾಳಿ ಸಂದರ್ಭದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net