ಫೆಂಗಲ್ ಎಫೆಕ್ಟ್ ಕಡಲೆಗೆ ಫಂಗಸ್

LXR KADALE
Published on

ಲಕ್ಷೆ್ಮೕಶ್ವರ: ಫೆಂಗಲ್- ಫಂಗಸ್​ನಿಂದಾಗಿ ನೆಟೆ ರೋಗ, ಸಿಡಿರೋಗ ಆವರಿಸಿ ಹಿಂಗಾರು ಹಂಗಾಮಿನ ಕಡಲೆ ಬೆಳೆ ಸಂಪೂರ್ಣ ಒಣಗುತ್ತಿದ್ದು, ರೈತರು ಕೊರಗುವಂತಾಗಿದೆ.

ಮುಂಗಾರಿನಲ್ಲಿ ಸಕಾಲಿಕ ಮಳೆ ಯಾಗದೆ ಹೆಸರು, ಶೇಂಗಾ ಬೆಳೆ ರೈತರಿಗೆ ಲಾಭ ತಂದುಕೊಡಲಿಲ್ಲ. ಹೆಸರು, ಶೇಂಗಾ ಬೆಳೆಯ ನಂತರ ಹಿಂಗಾರಿನಲ್ಲಿ ಬಹುತೇಕ ರೈತರು ಕಡಲೆ ಬಿತ್ತನೆ ಮಾಡಿದ್ದಾರೆ. ಬಿತ್ತನೆ ವೇಳೆ ಮಳೆ ಬಿಡುವು ನೀಡದ್ದರಿಂದ ಬಿತ್ತನೆ ಕಾಲಾವಧಿಯಲ್ಲೂ ಬಹಳಷ್ಟು ವ್ಯತ್ಯಾಸವಾಗಿದೆ. ಕೆಲವರು ಅಕ್ಟೋಬರ್ ಮೊದಲ ವಾರ ಬಿತ್ತನೆ ಮಾಡಿದ್ದರೆ, ಇನ್ನುಳಿದವರು ನವೆಂಬರ್ ಮೊದಲ ಹಾಗೂ ಎರಡನೇ ವಾರದಲ್ಲಿ ಬಿತ್ತನೆ ಮಾಡಿದ್ದಾರೆ. ಆದರೀಗ ಫೆಂಗಲ್ ಫಂಗಸ್​ನಿಂದ ಇಳುವರಿಗೆ ಕೊಕ್ಕೆ ಬೀಳುವಂತಾಗಿದೆ. ಲಕ್ಷೆ್ಮೕಶ್ವರ, ಅಡರಕಟ್ಟಿ, ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಕೊಕ್ಕರಗೊಂದಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ದೊಡ್ಡೂರ, ಶಿಗ್ಲಿ ಗ್ರಾಮ ವ್ಯಾಪ್ತಿಯ ಕಪ್ಪು ಮಣ್ಣಿನ 8,950 ಹೆಕ್ಟೇರ್ ಜಮೀನುಗಳಲ್ಲಿ ಕಡಲೆ ಬೀಜ ಬಿತ್ತನೆಯಾಗಿದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಸಿಗುವ ಔಷಧವಲ್ಲದೆ, ಖಾಸಗಿ ಕ್ರಿಮಿನಾಶಕ ಅಂಗಡಿಯಲ್ಲಿ ಹೆಚ್ಚು ಬೆಲೆ ತೆತ್ತು ಕ್ರಿಮಿನಾಶಕ/ ಪೋಷಕಾಂಶ ಸಿಂಪಡಣೆ ಮಾಡಿದ್ದಾರೆ. ಆದರೆ, ಉತ್ತಮವಾಗಿಯೇ ಇದ್ದ ಬೆಳೆಗೆ ನೆಟೆ ಬೇರು ಕೊಳೆ/ಸಿಡಿ ರೋಗದ ಸುಳಿಗೆ ಸಿಲುಕಿ ಒಣಗುತ್ತಿದೆ.

ಮುಂಗಾರು ಮಳೆ ಸರಿಯಾಗಿ ಸುರಿಯದೆ ಹೆಸರು, ಶೇಂಗಾ, ಹತ್ತಿ ಬೆಳೆಗಳು ಲಾಭ ತಂದುಕೊಡಲಿಲ್ಲ. ಹೀಗಾಗಿ ಕಡಲೆ ಬಿತ್ತನೆ ಮಾಡಲಾಗಿದೆ. ಜಮೀನು ಲಾವಣಿ, ಭೂಮಿ ಹದ ಮಾಡಿದ ಖರ್ಚು, ಗೊಬ್ಬರ, ಬೀಜ ಸಾವಿರಾರು ರೂ. ವ್ಯಯಿಸಿ ಬಿತ್ತನೆ ಮಾಡಿರುವ ಬೆಳೆದ ಬೆಳೆ ಒಂದೂವರೆ ತಿಂಗಳದ್ದಾಗಿದೆ. ಈಗಾಗಲೇ ಎರಡು ಬಾರಿ ಕ್ರಿಮಿನಾಶಕ/ಪೋಷಕಾಂಶ ಸಿಂಪಡಿಸಲಾಗಿದೆ. ವಾಯುಭಾರ ಕುಸಿತದಿಂದ ರೋಗಬಾಧೆೆ ಕಾಣಿಸಿಕೊಂಡು ಬೆಳೆ ಒಣಗುತ್ತಿದೆ. ಇದರ ನಿಯಂತ್ರಣ ಸಾಧ್ಯವಿಲ್ಲ. | ಬಸವರಾಜ ಮೆಣಸಿನಕಾಯಿ ರೈತ, ಲಕ್ಷೆ್ಮೕಶ್ವರ ಕಡಲೆ ಬೆಳೆಗೆ ಹವಾಮಾನ ವೈಪರೀತ್ಯ ಮಾರಕವಾಗಿದೆ. ಅಕಾಲಿಕ ಮಳೆಯಿಂದ ಬೇರು ಕಡಿಯುವ ಶಿಲೀಂದ್ರಗಳ ಸಂಖ್ಯೆ ಹೆಚ್ಚುತ್ತದೆ. ರೋಗ ತಡೆಗಟ್ಟುವುದು ಕಷ್ಟಸಾಧ್ಯ. ಆದಾಗ್ಯೂ ಸಕಾಲಿಕವಾಗಿ ಔಷಧೋಪಚಾರ ಮಾಡಲೇಬೇಕು. ಮಾಹಿತಿಗಾಗಿ ಕೃಷಿ ಅಧಿಕಾರಿ, ಕೃಷಿ ತಜ್ಞರನ್ನು ಸಂರ್ಪಸಬೇಕು. | ಚಂದ್ರಶೇಖರ ನರಸಮ್ಮನವರ ಕೃಷಿ ಅಧಿಕಾರಿ ಲಕ್ಷೆ್ಮೕಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net