

ಕೊಲ್ಹಾರ : ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರು ಅಥ್ಲೆಟಿಕ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ದಾಸರ ಟ್ರಿಪಲ್ ಜಂಪ್ದಲ್ಲಿ ಪ್ರಥಮ, 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಸ್ವಾತಿ ಜಂಬಗಿ ಕ್ರಾಸ್ ಕಂಟ್ರಿ ಓಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಂಗಮೇಶ್ವರ ವಿದ್ಯಾವರ್ಧಕ ಸಂದ ಅಧ್ಯ ಬಿ.ಯು ಗಿಡ್ಡಪ್ಪಗೋಳ, ಕಾರ್ಯದರ್ಶಿ ಎಸ್.ಎಸ್ ಪತಂಗಿ, ನಿರ್ದೇಶಕ ಸಿ.ಎಸ್ ಗಿಡ್ಡಪ್ಪಗೋಳ, ಟಿ.ಟಿ. ಹಗೆದಾಳ, ಪ್ರಾಚಾರ್ಯ ಎ.ಡಿ. ಚವ್ಹಾಣ, ಉಪನ್ಯಾಸಕರಾದ ರಮೇಶ ತೋಟದ, ಮಂಜುನಾಥ ಮಟ್ಯಾಳ ಸಾಧಕ ವಿದ್ಯಾರ್ಥಿನಿಯರನ್ನು ಗೌರವಿಸಿದರು.