ವಿದ್ಯಾರ್ಥಿನಿಯರು ವೈಯಕ್ತಿಕ ಶುಚಿತ್ವದ ಕಡೆ ಗಮನ ಕೊಡಿ: ಕುಷ್ಟಗಿ ವೈದ್ಯೆ ಪಿ.ಎಂ.ಪಾರ್ವತಿ ಸಲಹೆ

030922 Yarragera Sanitary pads for girl students from Inner Wheel Club
ಯರಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಇನ್ನರ್ ವ್ಹೀಲ್ ಕ್ಲಬ್‌ನಿಂದ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು.
Published on

ಕುಷ್ಟಗಿ: ಋತುಸ್ರಾವದ ಬಗ್ಗೆ ಕೀಳರಿಮೆ ಹಾಗೂ ಮೂಢನಂಬಿಕೆ ಬಿಟ್ಟು ವೈಯಕ್ತಿಕ ಶುಚಿತ್ವದ ಕಡೆ ಗಮನ ಹರಿಸಬೇಕು ಎಂದು ಡಾ.ಪಿ.ಎಂ.ಪಾರ್ವತಿ ಹೇಳಿದರು.

ಯರಗೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಇನ್ನರ್ ವ್ಹೀಲ್ ಕ್ಲಬ್ ಏಪರ್ರ್ಡಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾಸಿಕ ಋತುಸ್ರಾವ ವೇಳೆ ಪಾಲಕರು ಹೆಣ್ಣುಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸಲಲಾಯಿತು.

ಕ್ಲಬ್ ಅಧ್ಯಕ್ಷೆ ಸುಮ ಬ್ಯಾಳಿ, ಕಾರ್ಯದರ್ಶಿ ಗೌರಮ್ಮ ಕುಡತಿನಿ, ಮುಖ್ಯಶಿಕ್ಷಕ ಶಂಕರ್ ಹೊರಪ್ಯಾಟಿ, ಶಿಕ್ಷಕರಾದ ಶ್ರೀಕಾಂತ ದೇಶಪಾಂಡೆ, ಕುಮಾರಸ್ವಾಮಿ ಹಿರೇಮಠ, ಎಂ.ಗಂಗಾಧರ, ಮುನಿಯಪ್ಪ, ಮಂಜುನಾಥ ಟಕ್ಕಳಕಿ, ಲೀಲಾ ಶೆಟ್ಟರ್, ಸರೋಜಾದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net