ಹುಣಸೂರು ತಾಲೂಕು ಗ್ರಾಪಂಗಳಲ್ಲಿ ಸ್ತ್ರೀ ಚೇತನ

ಹುಣಸೂರು ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇಒ ಕೆ.ಹೊಂಗಯ್ಯ ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ ನೀಡಿದರು. ನಳಿನಾ, ಪುಷ್ಪಾವತಿ, ಆಶಾರಾಣಿ, ಮಂಜುಳಾ ನರಗುಂದ ಇತರರಿದ್ದರು.
ಹುಣಸೂರು ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಇಒ ಕೆ.ಹೊಂಗಯ್ಯ ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ ನೀಡಿದರು. ನಳಿನಾ, ಪುಷ್ಪಾವತಿ, ಆಶಾರಾಣಿ, ಮಂಜುಳಾ ನರಗುಂದ ಇತರರಿದ್ದರು.
Published on

ಹುಣಸೂರು: ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಶೇ.60ರಷ್ಟು ಮಹಿಳೆಯರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೂ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ತ್ರೀ ಚೇತನ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಕೆ. ಹೊಂಗಯ್ಯ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಎನ್‌ಆರ್‌ಎಲ್‌ಎಂ ಸಂಜೀವಿನಿ ಒಕ್ಕೂಟದ ಎಂಬಿಕೆ ಮತ್ತು ಪದಾಧಿಕಾರಿಗಳ ಒಕ್ಕೂಟದ ಸಭೆಯಲ್ಲಿ ನರೇಗಾ ಯೋಜನೆಯಡಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ವರ್ಷದಿಂದ ನರೇಗಾ ಕೂಲಿ ದರ ರೂ. 349 ರಿಂದ ರೂ.370ಕ್ಕೆ ಹೆಚ್ಚಳವಾಗಿದ್ದು, ಮಹಿಳಾ ಫಲಾನುಭವಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆಯಡಿ ಹಲವು ವೈಯಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೆ ಅವಕಾಶವಿದ್ದು, ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಈಗಾಗಲೇ ಮಾದರಿಯಾಗಿ 17 ಕೂಸಿನ ಮನೆಗಳು ಪ್ರಾರಂಭವಾಗಿದ್ದು, 6ತಿಂಗಳ ಮಗುವಿನಿಂದ 3 ವರ್ಷದೊಳಗಿನ ಮಕ್ಕಳ ಲಾಲನೆ ಪಾಲನೆಗೆ ಅವಕಾಶವಿದೆ. ಹಾಗಾಗಿ ದುಡಿಯುವ ಪೋಷಕರು ಇದರ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು. ಸಂಜೀವಿನಿ ಒಕ್ಕಟದ ಮಹಿಳೆಯರು ಸರ್ಕಾರದ ಸೇವೆಗಾಗಿ ಪಂಚಾಯಿತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಹ ಇದೇ ರೀತಿ ಸಹಕಾರ ನೀಡುವಂತೆ ಹೇಳಿದರು. ಅಲ್ಲದೆ ಕುಡಿಯುವ ನೀರು ಹಾಗೂ ಇತರೆ ಯಾವುದೇ ಸಮಸ್ಯೆಗಳಿಗಾಗಿ ಉಚಿತ ಸಹಾಯವಾಣಿ 8277506000 ಅನ್ನು ಸಂಪರ್ಕಿಸಬಹುದಾಗಿದೆ ಎಂದರು.

ಈ ವೇಳೆ ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ ನಳಿನಾ, ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕಿ ಆಶಾರಾಣಿ, ನರೇಗಾ ತಾಂತ್ರಿಕ ಸಂಯೋಜಕ ಎಂ.ಅರವಿಂದ, ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಮಂಜುಳಾ ನರಗುಂದ, ನರೇಗಾ ಐಇಸಿ ಸಂಯೋಜಕಿ ಪುಷ್ಪಾವತಿ, ಕ್ಲಸ್ಟರ್ ಮೇಲ್ವಿಚಾರಕರಾದ ಫರ್ಹದ್ ಭಾನು, ಎಚ್.ಎನ್.ಪ್ರವೀಣ್, ಎನ್‌ಆರ್‌ಎಲ್‌ಎಂ ಒಕ್ಕೂಟದ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net