ಸ್ತ್ರೀ ಸ್ವಾವಲಂಬಿ ಜೀವನಕ್ಕೆ ಸಂಜೀವಿನಿ ಆಸರೆ

Kanahosalli sanjeevini
ಕಾನಹೊಸಹಳ್ಳಿಯಲ್ಲಿ ಸಂಜೀವಿನಿ ಒಕ್ಕೂಟ ಆಯೋಜಿಸಿದ್ದ ಮಾಸಿಕ ಸಂತೆ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್ ಉದ್ಘಾಟಿಸಿದರು. ಪ್ರಮುಖರಾದ ನರಸಿಂಹ, ರಶ್ಮಿ, ಚೌಡಪ್ಪ ಇಂದ್ರಮ್ಮ, ಟಿ.ಸಿದ್ದಪ್ಪ, ನಾಗರಾಜ್ ಇತರರಿದ್ದರು.
Published on

ಕಾನಹೊಸಹಳ್ಳಿ: ಮಹಿಳೆಯರು ಸ್ವ ಉದ್ಯೋಗದಿಂದ ಸ್ವಾವಲಂಬಿ ಜೀವನ ನಡೆಸಲು ಸಂಜೀವಿನಿ ಯೋಜನೆ ಆಸರೆಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್ ತಿಳಿಸಿದರು.

ಇಲ್ಲಿನ ಗ್ರಾಪಂ ಕಚೇರಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ -ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಜೀವಿನಿ ಒಕ್ಕೂಟದ ಮೂಲಕ ಸ್ವ ಉದ್ಯೋಗ ಕೈಗೊಳ್ಳಲು ಅವಕಾಶಗಳಿವೆ. ಅಲ್ಲದೆ, ನೀವು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಂಜೀವಿನಿ ಯೋಜನೆಯ ಅಧಿಕಾರಿಗಳು ಸೇರಿ ಸ್ಥಳೀಯ ಆಡಳಿತ ಸಹಕಾರ ನೀಡಲಿದೆ. ಸರ್ಕಾರ ಮಹಿಳೆಯರ ಸ್ವ ಉದ್ಯೋಗಕ್ಕೆ ಒತ್ತು ನೀಡಿದ್ದು, ಲಾಭ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಬೇಕಿದೆ ಎಂದರು.

ಪಿಡಿಒ ಬಸಮ್ಮ ಬಿ ಮಾತನಾಡಿ, ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟಗಳನ್ನು ರಚಿಸಿಕೊಂಡು ಮಹಿಳೆಯರು ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ ಪಡೆಯಬೇಕು. ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಹಕಾರದಿಂದ ಒಕ್ಕೂಟಗಳು ಬ್ಯಾಂಕ್‌ಗಳಲ್ಲಿ ಸಾಲಸೌಲಭ್ಯ ಪಡೆದು ಆಹಾರ ಉತ್ಪನ್ನ ಸೇರಿ ಇತರ ವಸ್ತುಗಳ ತಯಾರಿಸುವ ಉದ್ಯೋಗ ಆರಂಭಿಸಬಹುದು ಎಂದರು.

ಸಂಜೀವಿನಿ ಒಕ್ಕೂಟದ ತಾಲೂಕು ವಲಯ ಮೇಲ್ವಿಚಾರಕ ಸಿ.ಎಸ್.ನರಸಿಂಹ, ವೈ.ಎಸ್.ರಶ್ಮಿ, ಆಶಾ ಕಾರ್ಯಕರ್ತೆ ಶಶಿಕಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net