ಗೌರವಧನ ಬಿಡುಗಡೆಗೆ ಮಹಿಳಾ ಕರಾಟೆ ತರಬೇತಿದಾರ ಆಗ್ರಹ

11 smg 7
ಕರಾಟೆ ತರಬೇತಿ ನೀಡಿದ್ದಕ್ಕೆ ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಂಜುಳಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯಗಳಲ್ಲಿ ಕರಾಟೆ ತರಬೇತಿ ನೀಡಿದ ಮಹಿಳಾ ಕರಾಟೆ ತರಬೇತಿದಾರರಿಗೆ ಅಗತ್ಯ ಗೌರವಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ತರಬೇತುದಾರರ ಒಕ್ಕೂಟದ ಅಧ್ಯಕ್ಷೆ ಮಂಜುಳಾ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸಮಾಜ ಕಲ್ಯಾಣ ಇಲಾಖೆಯಡಿ 2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕರಾಟೆ ತರಬೇತಿ ನೀಡಿದವರಿಗೆ ಇದುವರೆಗೂ ಗೌರವಧನ ನೀಡಿಲ್ಲ. ಸ್ವಂತ ಖರ್ಚಿನಲ್ಲಿ ಹಾಸ್ಟೆಲ್‌ಗೆ ತೆರಳಿ ತರಬೇತಿ ನೀಡಿದವರು ಈಗ ಗೌರವಧನ ಪಡೆಯಲು ಹರಸಾಹಸ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೂಡಲೇ ಗೌರವಧನ ಪಾವತಿಸುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net