ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಮೈಸೂರಿನಲ್ಲಿ ನರ್ಸ್ ಬಂಧನ

manjula
Published on

ಮೈಸೂರು: ಭ್ರೂಣಲಿಂಗ ಪತ್ತೆ ಹಾಗೂ ಹೆಣ್ಣುಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಗರದ ನರ್ಸ್‌ವೊಬ್ಬರನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಉದಯಗಿರಿಯ ಮಹದೇವಪುರ ಮುಖ್ಯರಸ್ತೆಯಲ್ಲಿರುವ ‘ಮಾತಾ ಆಸ್ಪತ್ರೆ’ಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಗರದ ನಿವಾಸಿ ಮಂಜುಳಾ ಬಂಧಿತ ಆರೋಪಿ. ಭ್ರೂಣ ಹತ್ಯೆ ಪ್ರಕರಣ ಬಯಲಿಗೆ ಬಂದ ನಂತರ ಈಕೆ ಅಲ್ಲಿ ಕೆಲಸಬಿಟ್ಟು ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಮಾಹಿತಿ ಅರಿತ ಪೊಲೀಸರು ಶುಕ್ರವಾರ ರಾತ್ರಿ ನಗರದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಮಾತಾ ಆಸ್ಪತ್ರೆಯು ಆರಂಭದಲ್ಲಿ ಲತಾ ಕ್ಲಿನಿಕ್ ಆಗಿತ್ತು. ಪ್ರಕರಣದ ಆರೋಪಿ ತುಳಸಿರಾಮ್ ಮತ್ತೊಬ್ಬ ಆರೋಪಿ ಚಂದನ್ ಬಲ್ಲಾಳ್‌ಗೆ ಈ ಕ್ಲಿನಿಕ್‌ಅನ್ನು ಮಾರಿದ್ದ. ಚಂದನ್ ಬಲ್ಲಾಳ್ ಈ ಕ್ಲಿನಿಕ್‌ನ ಹೆಸರ್ನ್ನು ‘ಮಾತಾ ಆಸ್ಪತ್ರೆ’ ಎಂದು ಬದಲಾಯಿಸಿದ್ದ. ಆದರೆ, ಈ ಆಸ್ಪತ್ರೆ ನೋಂದಣಿಯಾಗಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net