

ಹುಬ್ಬಳ್ಳಿ; ವಿಜಯರತ್ನ ಇಂಟರ್ ನ್ಯಾಷನಲ್ ಪ್ರಶಸ್ತ್ರಿ ಪುರಸ್ಕೃತ ಉದ್ಯಮಿ, ಸಮಾಜ ಸೇವಕ ಸಂತೋಷ ಆರ್. ಶೆಟ್ಟಿ ಅವರನ್ನು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿ ವೇದಿಕೆ ವತಿಯಿಂದ ಹುಬ್ಬಳ್ಳಿಯಲ್ಲಿ ಗೌರವಿಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ ಎಂ.ಆರ್. ಪಾಟೀಲ, ಪ್ರಧಾನ ಕಾರ್ಯದರ್ಶಿ ಡಾ. ಎಚ್.ವಿ. ಬೆಳಗಲಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಇಲೈಟ್ ಅಧ್ಯಕ್ಷ ಅವಿನಾಶ್ ಕುರ್ತಕೋಟಿ, ಕಾರ್ಯದರ್ಶಿ ಅಂಬಾಪ್ರಸಾದ್ ಮಲ್ಯ ಅವರು ಅಭಿನಂದಿಸಿದರು.
ವೀರು ಉಪ್ಪಿನ, ಅಮಿತ್ ಪವಾರ್, ಗುರುರಾಜ ಹೂಗಾರ, ಸುನೀಲ ಯಡ್ರಾವಿ, ಸಂಜಯ ಪೀರಾಪುರ, ಪ್ರಶಾಂತ ಕುರಹಟ್ಟಿ, ಸೋಮಶೇಖರ ಹುದ್ದಾರ, ಆರು ಗೌತಮಿ, ಸಲ್ಮಾಶೇಖ, ಪುಟ್ಟಪ್ಪನವರ, ಮೋಹನ ಘೋಡ್ಕೆ ಇತರರು ಉಪಸ್ಥಿತರಿದ್ದರು.