ವೆಂಕಟಕೃಷ್ಣ ಮಧೂರುಗೆ ಸನ್ಮಾನ

Bdk_Madhoor
Published on

ಮಧೂರು: ಅಂತಾರಾಷ್ಟ್ರೀಯ ಹಿರಿಯರ ದಿನಾಚರಣೆಯನ್ನು ಕೇರಳ ಸ್ಟೇಟ್ ಪೆನ್ಶನರ್ಸ್ ಸಂಘದ ಮಧೂರು ಘಟಕದ ಆಶ್ರಯದಲ್ಲಿ ಮಂಗಳವಾರ ಮಧೂರಿನಲ್ಲಿ ಆಚರಿಸಲಾಯಿತು. ಸಂಘದ ಹಿರಿಯ ಸದಸ್ಯ, ಹಿರಿಯ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ವೆಂಕಟಕೃಷ್ಣ ಮಧೂರು ಅವರನ್ನು ಅವರ ಮನೆಯಲ್ಲಿ ಗೌರವಿಸಲಾಯಿತು.

ಪ್ರೇಮಲತಾ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಘಟಕದ ಉಪಾಧ್ಯಕ್ಷ ಸತ್ಯನಾರಾಯಣ ತಂತ್ರಿ ಸ್ವಾಗತಿಸಿದರು. ಮಧೂರು ಘಟಕದ ಗೌರವಾಧ್ಯಕ್ಷ ಕಕ್ಕೆಪ್ಪಾಡಿ ವಿಷ್ಣು ಭಟ್ ಅವರು ವೆಂಕಟಕೃಷ್ಣ ಸಾಧನೆಗಳನ್ನು ತಿಳಿಸಿದರು.

ವೆಂಕಟಕೃಷ್ಣ ದಂಪತಿಯನ್ನು ಅಧ್ಯಕ್ಷ ನಾರಾಯಣ ಎಂ.ಶಾಲು ಹೊದಿಸಿ ಗೌರವಿಸಿದರು. ಕೇಶವ ಭಟ್ ಮನ್ನಿಪ್ಪಾಡಿ, ಬಾಲಕೃಷ್ಣ ಉಳಿಯ ಹಾಗೂ ಸವಿತಾ ಟೀಚರ್ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಜತೆಕಾರ್ಯದರ್ಶಿ ನೂತನಕುಮಾರಿ ವಂದಿಸಿದರು. ಕಾರ್ಯದರ್ಶಿ ಬಲರಾಮ ಭಟ್ ಮಧೂರು ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net