ಸಮ್ಮೇಳನ ಸರ್ವಾಧ್ಯಕ್ಷರಿಗೆ ಸನ್ಮಾನ

12 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಬೆಂಗಳೂರಿನ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್​ ವತಿಯಿಂದ ನಗರದಲ್ಲಿ ಸೆ. 28, 29ರಂದು ಆಯೋಜಿಸಿರುವ ಅಖಿಲ ಭಾರತ ಪ್ರಥಮ ಶೈಕ್ಷಣಿಕ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕ್ಲಾಸಿಕ್​ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಉಪ್ಪಾರ ಅವರನ್ನು ಆಯ್ಕೆ ಮಾಡಲಾಗಿದೆ.
ಪರಿಷತ್​ ಪದಾಧಿಕಾರಿಗಳು ಭಾನುವಾರ ಉಪ್ಪಾರ ನಿವಾಸಕ್ಕೆ ಭೇಟಿ ನೀಡಿ ಅಧಿಕೃತ ಆಹ್ವಾನ ನೀಡಿ ದಂಪತಿಗೆ ಸನ್ಮಾನಿಸಿದರು. ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸಂತೋಷವಾಗಿದೆ ಎಂದು ಲಕ್ಷ್ಮಣ ಉಪ್ಪಾರ ಹೇಳಿದರು.
ಸಂಸ್ಥಾಪಕ ರಾಜ್ಯಾಧ್ಯಕ್ಷ ಮನೋಹರ ನಾಯಕ್​, ಜಿ.ಎಸ್​. ಬಿರಾದಾರ, ರತ್ನಾ ಬದಿ, ಎನ್​.ವಿ. ರಾಠೋಡ, ಪಂಚಾಕ್ಷರಯ್ಯ ಹಿರೇಮಠ, ಪಾಂಡು ಚೌಹಾಣ, ಮಂಜುನಾಥ ಗಾಳಿ, ಉಷಾ ನಾಯಕ್​, ಎಸ್​.ಡಿ. ಮೂಡೆನ್ನವರ, ಸಂಜೀವ ರೆಡ್ಡಿ, ಸಂತೋಷ ಮುಂಡಗೋಡ, ಶಶಿರೇಖಾ ರಾಗಿ, ಶಾಂತಲಾ ನೀಲರೆಡ್ಡಿ, ಬಸವರಾಜ ಹಡಪದ, ಸುಮಾ ಹಡಪದ, ಇತರರು ಇದ್ದರು.
ಆನಂದ ಹಕ್ಕೆನ್ನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net