ಕಾಳಿಕಾ ಸಮ್ಮಾನ 30ರಂದು

kadlaaskar
Published on

ಹುಬ್ಬಳ್ಳಿ: ನಗರದ ಕಾಳಮ್ಮನ ಅಗಸಿಯಲ್ಲಿರುವ ಶ್ರೀ ಕಾಳಿಕಾ ದೇವಿ ದೇವಸ್ಥಾನದಲ್ಲಿ ಜು. 30ರಂದು ಸಂಜೆ 6 ಗಂಟೆಗೆ ವಿದ್ವಾನ ಶಂಕರಾಚಾರ್ಯ ಕಡ್ಲಾಸ್ಕರ ಅವರಿಗೆ ಕಾಳಿಕಾ ಸಮ್ಮಾನ-ಗೌರವ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.

ಉಡುಪಿ ಜಿಲ್ಲೆಯ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠವು ಆಸ್ಥಾನ ವಿದ್ವಾನ್ ಪ್ರದಾನ ಮಾಡಿರುವ ಹಾಗೂ ಕೇಂದ್ರದ ಅಬಕಾರಿ ಮತ್ತು ಕಸ್ಟಮ್್ಸ ಇಲಾಖೆಯ ಸಹಾಯಕ ಆಯುಕ್ತರಾಗಿ ಬಡ್ತಿ ಹೊಂದಿರುವ ಹಿನ್ನೆಲೆಯಲ್ಲಿ ಶ್ರೀ ಕಾಳಿಕಾ ಸೇವಾ ಮಂಡಳ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಡ್ಲಾಸ್ಕರ್ ಅವರು ಹುಬ್ಬಳ್ಳಿಯಲ್ಲಿ ವಿಶ್ವಬ್ರಾಹ್ಮಣ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ದೇವ ಪೂಜಾ ಪದ್ಧತಿ, ಶೋಡಷ ಸಂಸ್ಕಾರ ವಿಶ್ಲೇಷಣೆ, ಶ್ರೀ ಗುರು ಚರಿತ್ರೆ ಪುಸ್ತಕಗಳ ಕರ್ತೃುಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net