ರಾಯರ ಸನ್ನಿಧಿಯಲ್ಲಿ ನಟ ಸುದೀಪ್​; ಶ್ರೀಸುಬುಧೇಂದ್ರ ತೀರ್ಥರಿಂದ ಸನ್ಮಾನ..

Sudeep
Published on

ರಾಯಚೂರು: ನಟ ಕಿಚ್ಚ ಸುದೀಪ್ ಇಂದು ಮಂತ್ರಾಲಯ ಶ್ರೀಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ತೆರಳಿ, ರಾಯರ ದರ್ಶನ ಪಡೆದಿದ್ದು, ಸ್ವಾಮೀಜಿಯವರ ಆಶೀರ್ವಾದಕ್ಕೂ ಪಾತ್ರರಾಗಿದ್ದಾರೆ. ಮಂತ್ರಾಲಯದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸುದೀಪ್​ಗೆ ಶಾಲು ಹೊದೆಸಿ ಸನ್ಮಾನಿಸಿದರು.

ಮಂತ್ರಾಲಯದಲ್ಲಿ ಆಯೋಜಿಸಲಾಗಿದ್ದ ರಾಯರ ಗುರುವೈಭವೋತ್ಸವ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಅಲ್ಲಗೆ ಭೇಟಿ ನೀಡಿದ್ದರು. ಇಂದು ರಾಯರ 401ನೇ ಪಟ್ಟಾಭಿಷೇಕ ದಿನವಾಗಿದ್ದು, ಇದನ್ನು ಗುರುವೈಭವೋತ್ಸವವಾಗಿ ಆಚರಿಸಲಾಗಿದೆ.

ಗುರುವೈಭವೋತ್ಸವದ ಪ್ರಯುಕ್ತ ರಾಯರ ಮಠದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರಿಗೆ ಸನ್ಮಾನವನ್ನೂ ಏರ್ಪಡಿಸಲಾಗಿತ್ತು. ಆ ಪ್ರಕಾರ ರಾಯರ ವೃಂದಾವನ ದರ್ಶನ ಪಡೆದ ಬಳಿಕ ಸುದೀಪ್ ಶ್ರೀ ಸುಬುಧೇಂದ್ರ ತೀರ್ಥರಿಂದ ಸನ್ಮಾನ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net