ಜಿಲ್ಲೆಯಲ್ಲಿ ಗುಣಮಟ್ಟದ ಹಾಲು ಪೂರೈಕೆ: ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ ಹೇಳಿಕೆ

felicitation ceremony for Manmul director Mandya
Published on

ಮಂಡ್ಯ: ರೈತರ ಅನುಕೂಲಕ್ಕಾಗಿ ಹಾಗೂ ರಾಸುಗಳಿಗೆ ಉತ್ತಮ ಮೇವು ಸಿಗಲೆಂದು ಬಿತ್ತನೆ ಬೀಜ ಪೂರೈಕೆ, ಮೇವು ಕತ್ತರಿಸುವ ಯಂತ್ರ ವಿತರಣೆ, ಸಹಾಯ ಧನ ಸೇರಿದಂತೆ ಹಲವು ಯೋಜನೆ ನೀಡುತ್ತಾ ಬಂದಿದ್ದೇವೆ. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಗೊಳಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನ್‌ಮುಲ್ ಅಧ್ಯಕ್ಷ ಯು.ಸಿ.ಶಿವಕುಮಾರ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಯೂನಿಯನ್ ಮಂಡ್ಯ ತಾಲೂಕು ಘಟಕದಿಂದ ಆಯೋಜಿಸಿದ್ದ ಮನ್‌ಮುಲ್ ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮನ್‌ಮುಲ್ ಅಭಿವೃದ್ಧಿಗೆ ರೈತರು ಹಾಗೂ ಪಕ್ಷಾತೀತವಾಗಿ ಕೆಲಸ ಮಾಡುತ್ತಿರುವುದರಿಂದ ಜಿಲ್ಲೆಯ ಏಳೂ ತಾಲೂಕಿನಿಂದಲೂ ಗುಣಮಟ್ಟದ ಹಾಲು ಪೂರೈಕೆ ಆಗುತ್ತಿದೆ ಎಂದರು.

ಮೂರನೇ ಬಾರಿ ನನ್ನನ್ನು ಮನ್‌ಮುಲ್ ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನನ್ನನ್ನೂ ಸೇರಿದಂತೆ ಮೂವರು ನಿರ್ದೇಶಕರನ್ನು ಪಕ್ಷಾತೀತವಾಗಿ ಸನ್ಮಾನಿಸುತ್ತಿರುವುದು ಸಂತಸ ತಂದಿದೆ. ಎಲ್ಲರ ಭರವಸೆ ಉಳಿಸಿಕೊಂಡು ಹೋಗುತ್ತೇವೆ. ನೌಕರರಿಗೆ ವೇತನ ಹೆಚ್ಚಳ ಜತೆಗೆ 1 ಲಕ್ಷ ರೂವರೆಗೆ ಪಾಲಿಸಿಯನ್ನು ನೀಡುತ್ತಿದ್ದೇವೆ. ಇದೆಲ್ಲವನ್ನೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನ್‌ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಮಾತನಾಡಿ, ರೈತರು ಎಷ್ಟು ಗುಣಮಟ್ಟದ ಹಾಲು ಉತ್ಪಾದಕರು ಪೂರೈಕೆ ಮಾಡುತ್ತಾರೋ ಅಲ್ಲಿವರೆಗೂ ಮನ್‌ಮುಲ್ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ಮನ್‌ಮುಲ್ ನಿರ್ದೇಶಕ ಎಂ.ಎಸ್.ರಘುನಂದನ್, ಮನ್‌ಮುಲ್ ಉಪ ವ್ಯವಸ್ಥಾಪಕ ಮಂಜೇಶ್‌ಗೌಡ, ಆಡಳಿತ ವ್ಯವಸ್ಥಾಪಕ ಶ್ಯಾಮ್ ಸುಂದರ್, ಫೈನಾನ್ಸ್ ವ್ಯವಸ್ಥಾಪಕಿ ಪುಷ್ಪಲತಾ, ಇಂಜಿನಿಯರ್ ವಿಭಾಗದ ಶಿವಕುಮಾರ್, ಸಹಾಯಕ ವ್ಯವಸ್ಥಾಪಕ ಹೊಂಬೇಗೌಡ, ಯಶವಂತ್, ಪೂಜಾ, ಯೂನಿಯನ್ ಅಧ್ಯಕ್ಷ ಶಿವಕುಮಾರ್, ಪದಾಧಿಕಾರಿ ನಾಗರಾಜು ಚಾಮಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net