ಕಂಪನಿ ಕೆಲಸ ಪ್ರಾಮಾಣಿಕತೆಯಿಂದ ನಿರ್ವಹಿಸಿ

14 HBD 1
ಹುಮನಾಬಾದ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘಕ್ಕೆ ನೇಮಕರಾದ ವೀರಣ್ಣ ಮುದ್ನಾಳೆ, ಸೂರ್ಯಕಾಂತ ಬಾಳೋಸ್ಕರ್, ಭರತ ಭೂಷಣ ಅವರನ್ನು ಸನ್ಮಾನಿಸಲಾಯಿತು. ಶಂಕರ ಅಡಕಿ, ಶಿವಶಂಕರ ಬಪ್ಪಣ್ಣ, ರಮೇಶ ಮೈನಾಳೆ, ಅಜಗರ್ ಅಲಿ, ಗುರುಶಾಂತ ವಾರದ, ಸೂರ್ಯಕಾಂತ ಪಾಟೀಲï, ಮಹೇಶ ಘಾಳೆ, ಪ್ರಕಾಶ ವರ್ಮಾ ಇತರರಿದ್ದರು.
Published on

ಹುಮನಾಬಾದ್: ಮೊದಲು ವಿದ್ಯುತ್ ಕಂಪನಿ ಉಳಿಸುವುದರ ಜತೆಗೆ ನೌಕರರ ಸಂಘ ಬಲಿಷ್ಠಗೊಳಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ (ಜೆಸ್ಕಾಂ ವಿಭಾಗ) ನೂತನ ಉಪ ಕಾರ್ಯದರ್ಶಿ ವೀರಣ್ಣ ಮುದ್ನಾಳೆ ಹೇಳಿದರು.

ಪಟ್ಟಣದ ಕೆಇಬಿ ಕಚೇರಿ ಆವರಣದಲ್ಲಿ ಶನಿವಾರ ಜೆಸ್ಕಾಂ ನೌಕರರ ಸಂಘದ ಸ್ಥಳೀಯ ಸಮಿತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸದಾ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದರ ಮೂಲಕ ಅವರು ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ. ಕಂಪನಿ ಕೆಲಸ ಪ್ರಾಮಾಣಿಕತೆಯಿಂದ ನಿರ್ವಹಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಕಂಪನಿಗಳು ಉಳಿದರೆ ನಾವು ಇರುತ್ತೇವೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕೆಂದು ನೌಕರರಿಗೆ ಹೇಳಿದರು.

ಎರಡು ಸಲ ಉಪ ಕಾರ್ಯದರ್ಶಿಯಾಗಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿರುವೆ. ನೌಕರರಿಗೆ ವೇತನ ಪರಿಷ್ಕರಣೆ ಲಾಭ ಸಿಕ್ಕಿದ್ದು, ೨೦೨೭ರ ಪರಿಷ್ಕರಣೆಯೂ ಬಂಪರ್ ಇರಲಿದೆ ಎಂದರು.

ಜೆಸ್ಕಾಂ ಉಪವಿಭಾಗದ ಇಇ ಶಂಕರ ಅಡಕಿ, ಅಧಿಕಾರಿಗಳಾದ ಶಿವಶಂಕರ ಬಪ್ಪಣ್ಣ, ರಮೇಶ ಮೈನಾಳೆ, ಅಜಗರ್ ಅಲಿ, ಗುರುಶಾಂತ ವಾರದ, ಸೂರ್ಯಕಾಂತ ಪಾಟೀಲ್, ಪತ್ತಿನ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಘಾಳೆ, ಜೆಸ್ಕಾ ನೌಕರರ ಕಲ್ಯಾಣ ಸಂಘದ ಪ್ರಕಾಶ ವರ್ಮಾ, ರಮೇಶ ಸಂಗಮ, ಥಾಮಸ್ ಕಟ್ಟಿಮನಿ, ಶರಣಕುಮಾರ, ರವಿಚಂದ್ರ, ಅಂಬದಾಸ, ಶಿವಕುಮಾರ, ಶ್ರೀನಿವಾಸ ಇತರರಿದ್ದರು. ಗಣಪತಿ ಖೇಣಿಕರ ನಿರೂಪಣೆ ಮಾಡಿದರು.

ಸನ್ಮಾನ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ-೬೫೯ (ಜೆಸ್ಕಾಂ ವಿಭಾಗ) ನೂತನ ಉಪ ಕಾರ್ಯದರ್ಶಿ ವೀರಣ್ಣ ಮುದ್ನಾಳೆ, ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸೂರ್ಯಕಾಂತ ಬಾಳೋಸ್ಕರ್, ಬೀದರ್ ವೃತ್ತದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡ ಭರತ ಭೂಷಣ ಅವರನ್ನು ಸನ್ಮಾನಿಸಲಾಯಿತು.

ವಿದ್ಯುತ್ ಕಂಪನಿ ನೌಕರರು ಸಾಕಷ್ಟು ಸಂಕಷ್ಟಗಳ ಮಧ್ಯೆ ಕೆಲಸ ಮಾಡುತ್ತಾರೆ. ಅವರ ಕಾನೂನು ಚೌಕಟ್ಟಿನಲ್ಲಿ ಆಗಬೇಕಾದ ಕೆಲಸಗಳಿಗೆ ತೊಂದರೆಯಾಗದಂತೆ ಅಧಿಕಾರಿಗಳು ಗಮನಹರಿಸಿ ಸ್ಪಂದಿಸಬೇಕು. ಎಲ್ಲರ ಹಿತಕಾಪಾಡುವುದು ಸಂಘದ ಉದ್ದೇಶವಾಗಿದೆ. ಯಾವುದೇ ಒತ್ತಡವಿದ್ದರೂ ಕೆಲಸ ಮಾಡುವಾಗ ರಕ್ಷಣೆಯ ಪರಿಕರಗಳನ್ನು ಕಡ್ಡಾಯ ಬಳಸಿ ಅಪಘಾತವಾಗದಂತೆ ನೌಕರರು ಎಚ್ಚರ ವಹಿಸಬೇಕು.

| ವೀರಣ್ಣ ಮುದ್ನಾಳೆ ಸಂಘದ ಜೆಸ್ಕಾಂ ವಿಭಾಗದ ಉಪ ಕಾರ್ಯದರ್ಶಿ

ನೌಕರರು, ಅಧಿಕಾರಿಗಳು ಎನ್ನುವ ಯಾವುದೇ ಬೇಧವಿಲ್ಲದೆ ನೌಕರರ ಕೆಲಸ ಕಾನೂನಿನಡಿ ಮಾಡಿಕೊಡಲಾಗುವುದು. ಏನಾದರೂ ತೊಂದರೆಯಾದಲ್ಲಿ ನೇರವಾಗಿ ನನ್ನ ಗಮನಕ್ಕೆ ತನ್ನಿ. ಇಲ್ಲವೇ ನಿಮ್ಮ ಸಂಘದ ಗಮನಕ್ಕೆ ತಂದರೆ ಬಗೆಹರಿಸಲಾಗುವುದು.
| ಶಂಕರ ಅಡಕಿ ಎಎ ಜೆಸ್ಕಾಂ ಉಪವಿಭಾಗ ಹುಮನಾಬಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net