ಸಮಾಜದಲ್ಲಿ ಹೆಚ್ಚುತ್ತಿರುವ ಬ್ರಾಹ್ಮಣ ವಿರೋಧಿ ಶಕ್ತಿಗಳು

felicitation ceremony
Published on

ಮೈಸೂರು: ಸಮಾಜದಲ್ಲಿ ಬ್ರಾಹ್ಮಣ ವಿರೋಧಿ ಶಕ್ತಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದು, ಬ್ರಾಹ್ಮಣರು ಹಾಗೂ ಸನಾತನ ಧರ್ಮದ ಬಗ್ಗೆ ಬೇಕಾ ಬಿಟ್ಟಿ ಟೀಕೆ ಮಾಡುತ್ತಿದ್ದಾರೆ. ಇಂತಹ ಇಂತಹ ಸಂದರ್ಭದಲ್ಲಿ ವೈದಿಕಮಾರ್ಗ ರಕ್ಷಿಸುವುದು ಬ್ರಾಹ್ಮಣರ ಕರ್ತವ್ಯ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.

ವೇದಶಾಸ್ತ್ರ ಪೋಷಿಣೀ ಸಭಾ ವತಿಯಿಂದ ನಗರದ ಕೃಷ್ಣಮೂರ್ತಿಪುರಂನ ಶಾರದವಿಲಾಸ ಶತಮಾನೋತ್ಸವ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೈದಿಕರಿಗೆ ಗೌರವ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿ, ವೈದಿಕ ಮಾರ್ಗವನ್ನು ನಿಕೃಷ್ಟವಾಗಿ ನೋಡಬಾರದು. ಬ್ರಾಹ್ಮಣರಾಗಿ ನಾವು ವೈದಿಕ ವಿದ್ಯೆಯನ್ನು ರಕ್ಷಿಸಬೇಕು. ಸರ್ಕಾರದಲ್ಲಿ ವೈದಿಕ ಮಾರ್ಗಕ್ಕೆ ಬೆಲೆ ದೊರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವೇದಶಾಸ್ತ್ರ ಪೋಷಿಣಿ ಸಭಾ ವೈದಿಕ ಮಾರ್ಗವನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲಿ ಧರ್ಮ ಉಳಿಯಲು ವೈದಿಕರು ಕಾರಣ. ವೇದವಿದ್ಯೆ ಮುಂದಿನ ತಲೆಮಾರಿಗೆ ಕೊಂಡೊಯ್ಯಲು ವೈದಿಕರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ವೇದವಿದ್ಯೆ ಇಂದಿಗೂ ಉಳಿದುಕೊಳ್ಳಲು ವೈದಿಕರು ಕಾರಣ. ಪ್ರಕೃತಿಯನ್ನು ಆರಾಧಿಸುವ ಧರ್ಮಗಳು ವಿಶ್ವದಲ್ಲಿ ಸಾಕಷ್ಟು ಇತ್ತು. ವಿವಿಧ ಧರ್ಮಗಳ ಪ್ರಭಾವದಿಂದ ಆ ಧರ್ಮಗಳು ನಾಶವಾಗಿ ಹೋಯಿತು. ಆದರೆ, ಎಷ್ಟೇ ಧರ್ಮಗಳ ದಾಳಿ ನಡೆದರೂ ಸನಾತನ ಧರ್ಮ ಇಂದಿಗೂ ಉಳಿದುಕೊಂಡಿದೆ. ಇಂತಹ ಸನಾತನ ಧರ್ಮವನ್ನು ಉಳಿಸುವ ಕಾರ್ಯವನ್ನು ಎಲ್ಲರು ಮಾಡಬೇಕು. ನಮ್ಮ ಧರ್ಮದ ಬಗ್ಗೆ ಮಾತಾಡಿದರೆ ಕೋಮುವಾದಿಗಳು ಎಂದು ಹಣೆಪಟ್ಟಿ ಕಟ್ಟುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದು ಎಲ್ಲವೂ ವ್ಯಾಪಾರೀಕರಣ ಆಗುತ್ತಿದ್ದು, ಧರ್ಮದ ವಿಚಾರ ತಿಳಿಸುವ ಜವಾಬ್ದಾರಿ ವೈದಿಕರ ಮೇಲಿದೆ, ಏಕೆಂದರೆ ನಮ್ಮ ಮಾತಿಗಿನಿಂದ ನಿಮ್ಮ ಮಾತನ್ನು ಜನರು ಹೆಚ್ಚಾಗಿ ನಂಬುತ್ತಾರೆ. ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪೂರ್ಣಾಹುತಿಗೆ ಮಂತ್ರಿಗೋಸ್ಕರ ಕಾಯುವುದು ಸರಿಯಲ್ಲ. ರಾಜಕೀಯ ಮುಖಂಡರಿಗೋಸ್ಕರ ಭಗವಂತನ ಕಡೆಗಣಿಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ವೈದಿಕರು ಚಿಂತನೆ ನಡೆಸಬೇಕು. ಧರ್ಮದ ಶ್ರೇಷ್ಠತೆಯನ್ನು ಜನರಿಗೆ ತಿಳಿಸಿದರೆ ಸಮಾಜದಲ್ಲಿ ಬದಲಾವಣೆ ನಿರೀಕ್ಷಿಸಬಹದು ಎಂದು ಹೇಳಿದರು.

ವಿದ್ವಾಂಸ ಟಿ.ವಿ. ಸತ್ಯನಾರಾಯಣ ಮಾತನಾಡಿ, ನಮ್ಮ ಜೀವನದಲ್ಲಿ ಸಂಕಷ್ಟ ಎದುರಾದ ಸಂದರ್ಭ ಪುರೋಹಿತರು ನಮಗೆ ಮಾರ್ಗದರ್ಶನ ನೀಡುತ್ತಾರೆ. ಅವರು ಮಾಡುತ್ತಿರುವ ಸಮಾಜ ಸೇವೆಗೆ ಅವರನ್ನು ಗೌರವಿಸುವ ಕಾರ್ಯವನ್ನು ಎಲ್ಲರು ಮಾಡಬೇಕು ಎಂದರು.

ಸನ್ಮಾನಿತರು: ಎ.ಎಸ್. ವಿಶ್ವೇಶ್ವರ ಜೋಯಿಸ್, ಕೆ.ಜಿ. ಶಂಕರನಾರಾಯಣ ಶಾಸ್ತ್ರಿ, ಬಿ.ಆರ್. ನರಸಿಂಹಸ್ವಾಮಿ, ಜಗನ್ನಾಥ ಸೀತಾರಮ ಜೋಶಿ, ಹಿ.ಕೃ. ಶ್ರೀನಿವಾಸ ಶರ್ಮ, ಸುಬ್ರಹ್ಮಣ್ಯ ಉಪಾಧ್ಯಾಯ, ಸುಬ್ರಾಯ ಗಣಪತಿ ಭಟ್ಟ, ಕೃಷ್ಣ ಮಂಜ ಭಟ್ಟ, ರಾಮಕೃಷ್ಣ ಭಟ್ಟ, ಕೃಷ್ಣ ಶಂಕರ ಭಟ್ಟ, ಎಚ್. ಬಾಲಚಂದ್ರ ಜೋಯಿಸ್, ತಿರುಮಲೇಶ್ವರ ರಾಮಕೃಷ್ಣ ಭಟ್ಟ, ಮಹಾಬಲೇಶ್ವರ ನಾಗಭಟ್ಟ, ರಮೇಶ ಗಂಗಾಧರ ಭಟ್ಟ ಜೋಶಿ, ತಿರುಮಲಾಚಾರ್, ನರಸಿಂಹ ಪರಮೇಶ್ವರ ಜೋಶಿ, ನಾರಾಯಣ ನಾಗಭಟ್ಟ, ಗಣಪತಿ ವೆಂಕಟರಮಣ ಭಟ್ಟ, ಎನ್.ಎ. ಚಂದ್ರಶೇಖರ ಶಾಸ್ತ್ರಿ, ವಿ.ಚಂದ್ರಶೇಖರ ಸಣ್ಣ ಭಟ್ಟ, ಅನಂತಾಚಾರ್ಯ ಜಹಗೀರದಾರ್, ಟಿ.ಎಂ. ಚಂದ್ರಶೇಖರ ಭಟ್ಟ, ಚಿದಂಬರ ಭಟ್ಟ, ವೆಂಕಟರಮಣ ಕೃಷ್ಣ ಜೋಶಿ, ಗಣಪತಿ ಗೋಪಾಲ ಭಟ್ಟ, ತಿಮ್ಮಣ್ಣ ಸತ್ಯನಾರಾಯಣ ಭಟ್ಟ, ಟಿ.ಎ. ಶೇಷಾದ್ರಿ, ಗಣಪತಿ ಭಟ್ಟ, ವಾಸುದೇವ ಪಾಂಡುರಂಗ ಛತ್ರೆ, ಶಂಕರ ಭಟ್ಟ, ಟಿ.ಎಸ್. ಸುಬ್ರಹ್ಮಣ್ಯ, ಅನಂತ ಭಟ್ಟ ದೇವಧರ್, ಜಯತೀರ್ಥಾಚಾರ್ ಒಡೇರ್, ಕೃಷ್ಣಭಟ್ಟ, ರಾಮಚಂದ್ರ ಶಂಭು ಭಟ್ಟ, ಎಚ್.ಸಿ. ವಾಸುದೇವ, ಕೆ.ಎನ್. ಅನಂತರಾಘವನ್, ಶ್ರೀರಾಮ ತಿಮ್ಮಣ್ಣ ಭಟ್ಟ, ಕೃಷ್ಣಾನಂದ ಶಿವರಾಮ ಭಟ್ಟ, ಶಂಕರ ಭಟ್ಟ, ನಾಗಾನಂದ ಕುಮಾರ ಮಾರಿಗೋಳಿ, ಉಮೇಶ ಚಕ್ರವರ್ತಿ, ಗಣಪತಿ ಹೇರಂಬ ಭಟ್ಟ, ರಾಧಾಕೃಷ್ಣ ಸೀತಾರಾಮ ಭಟ್ಟ, ಎಂ.ಎಸ್. ಶಿವಕುಮಾರ ಅವಧಾನಿ, ಡಿ. ಸತ್ಯನಾರಾಯಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಎನ್. ನಾಗರಾಜ ಭಟ್ಟ, ಗೌರವ ಕಾರ್ಯದರ್ಶಿ ಎ.ಎಂ. ಚಂದ್ರಶೇಖರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net