ಯುಪಿಎಸ್ಸಿ ಸಾಧಕ ಶಾಂತಪ್ಪಗೆ ಸನ್ಮಾನ

IMG_20240417_205419_301-1.jpg
Published on

ಹುಬ್ಬಳ್ಳಿ: ದ್ವೀತಿಯ ಪಿಯುಸಿಯಲ್ಲಿ ಎರಡು ಬಾರಿ ಫೇಲಾಗಿದ್ದರೂ ಯುಪಿಎಸ್ಸಿ ಪರೀಕ್ಷೆ ಪಾಸಾಗಿರುವ ಕಲ್ಯಾಣ ಕರ್ನಾಟಕದ ಹೆಮ್ಮೆಯ ಪುತ್ರ ಸಬ್ ಇನ್ಸಪೆಕ್ಟರ್ ಶಾಂತಪ್ಪ ಕುರುಬರ ಅವರ ಸಾಧನೆ ಇಡೀ ಕನ್ನಡ ನಾಡಿಗೆ ಹೆಮ್ಮೆ ತಂದಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಶಾಂತಪ್ಪ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ವಿದ್ಯಾಥಿರ್ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಫೇಲಾದರೂ ನಿರಂತರ ಪರಿಶ್ರಮದಿಂದ ಅತ್ಯುನ್ನತ ಯುಪಿಎಸ್ಸಿ ಪರೀೆಯನ್ನು ಪಾಸಾಗುವ ಮೂಲಕ ಪ್ರೇರಣೆಯಾಗಿದ್ದಾರೆ ಎಂದರು.

ವಿದ್ಯಾಥಿರ್ಗಳು ಜೀವನದ ಭರವಸೆಗಳು ಬತ್ತದಂತೆ ನೋಡಿಕೊಳ್ಳಬೇಕು. ಕನಸು ಕಾಣಲು ದುಡ್ಡು ಖರ್ಚು ಮಾಡಬೇಕಾಗಿಲ್ಲ ಒಂದಿಷ್ಟು ಶ್ರಮ ಹಾಕಿದರೆ ಸಾಕು. ನಿರಂತರ ಪ್ರಯತ್ನ ತಮ್ಮ ಬದುಕನ್ನು ಹಸನುಗೊಳಿಸುತ್ತದೆ ಎಂದು ಸಭಾಪತಿ ಹೊರಟ್ಟಿ ಅವರು ಹೇಳಿದರು.

ಸಭಾಪತಿಯವರ ವಿಶೇಷ ಕರ್ತವ್ಯ ಅಧಿಕಾರಿ ಡಾ. ಮಹೇಶ ವಾಳ್ವೇಕರ್, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net