ಮಕ್ಕಳಿಗೆ ಸಿರಿಧಾನ್ಯಗಳ ಆಹಾರ ನೀಡಿ

poshana
Published on

ಲಕ್ಷ್ಮೇಶ್ವರ: ಸದೃಢವಾದ ದೇಹದಲ್ಲಿ ಸದೃಢವಾದ ಮನಸು ನೆಲೆಗೊಳ್ಳಲು ಪೌಷ್ಟಿಕ ಆಹಾರಗಳ ಅವಶ್ಯಕತೆ ಇದೆ. ಪಾಲಕರು ಮಕ್ಕಳಿಗೆ ಸಿರಿಧಾನ್ಯಗಳ ಆಹಾರ ನೀಡಬೇಕು ಎಂದು ಮುಖ್ಯೋಪಾದ್ಯಾಯಿನಿ ಇಂದುಮತಿ ಜಕ್ಕನಗೌಡ್ರ ಹೇಳಿದರು.

ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪೋಷಣ ಅಭಿಯಾನ ಮತ್ತು 2023-24 ನೇ ಸಾಲಿನ ಸಿರಿಧಾನ್ಯಗಳ ವರ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಹಸಿವು ಮತ್ತು ಅಪೌಷ್ಟಿಕತೆ ನಿವಾರಣೆಗೆ ಸಿರಿಧಾನ್ಯಗಳನ್ನು ಜಗತ್ತಿಗೆ ಪರಿಚಯಿಸಲು ಪ್ರಸಕ್ತ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಗಿದೆ. ಮಕ್ಕಳಿಗೆ ಬೇಕರಿ ಪದಾರ್ಥಗಳ ಬದಲಿಗೆ ಸಿರಿಧಾನ್ಯಗಳಲ್ಲಿ ಆಹಾರ ಪದಾರ್ಥ ಸಿದ್ಧಪಡಿಸಿ ಕೊಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು’ ಎಂದರು.

ಶಿಕ್ಷಕರಾದ ಜೆ.ವಿ. ಅರಳಿಕಟ್ಟಿ, ಕೆ.ಎಸ್. ಹಿರೇಮಠ, ಪ್ರಕಾಶ ಕೊಂಡಾಬಿಂಗಿ, ಇ.ಡಿ. ಮದನರಾಜ, ಈರಣ್ಣ ಬಳಿಗಾರ, ಬಿ.ಎಸ್ ನಾಗನಗೌಡ್ರ, ಎಸ್.ಎಸ್. ಲೆಕ್ಕದ, ಎಸ್.ಕೆ. ಹೂಗಾರ, ಪೂರ್ಣಿಮಾ, ಅನಸೂಯಾ, ನಿರ್ಮಲಾ, ಈರಮ್ಮ, ದೀಪಾ, ಮಾದೇವಿ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net