ಚಿಕ್ಕ ವಯಸ್ಸಿನಿಂದಲೇ ಸಿರಿಧಾನ್ಯದ ಆಹಾರ ಕೊಡಿ

h1-panchavati
Published on

ಹುಬ್ಬಳ್ಳಿ: ವರದಶ್ರೀ ಫೌಂಡೇಷನ್ ವತಿಯಿಂದ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಇತ್ತೀಚೆಗೆ ಸಿರಿಧಾನ್ಯ ಮೇಳ, ಸಸ್ಯಶಾಮಲಾ ಹಾಗೂ ಪಂಚವಟಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಬಿಇಒ ಉಮೇಶ ಬೊಮ್ಮಕ್ಕನವರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೆ ಸಿರಿಧಾನ್ಯದ ಆಹಾರ ಕೊಡಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಸಿಗಲಿದೆ. ನಮ್ಮ ದೇಹ ಸದೃಢವಾಗಿದ್ದರೆ ದೇಶ ಸದೃಢವಾಗಿದ್ದಂತೆ. ಹಾಗಾಗಿ ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣಲು ಸಾಧ್ಯ ಎಂದರು.
ಫೌಂಡೇಷನ್ ಅಧ್ಯಕ್ಷ ಮಲ್ಲಿಕಾರ್ಜುನ ರಡ್ಡೇರ ಮಾತನಾಡಿ, ಮಕ್ಕಳು ಮತ್ತು ತಾಯಂದಿರು ದೇಶದ ಸಂಪತ್ತು. ಅವರಿಗೆ ಆರಂಭದಲ್ಲಿಯೇ ನಮ್ಮ ಆಹಾರ ಪದ್ಧತಿಯನ್ನು ತಿಳಿಹೇಳಬೇಕು. ಮಾರುಕಟ್ಟೆಯಲ್ಲಿ ಲಭ್ಯ ಇರುವ ಕಳಪೆ ಆಹಾರದಿಂದ ಆರೋಗ್ಯ ಹಾಳಾಗುತ್ತಿದೆ. ಇನ್ಮುಂದೆ ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಮೊದಲು ಕುಟುಂಬ ಆರೋಗ್ಯವಂತವಾಗಿಡಲು ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕಿ ಸಿ.ಬಿ. ಪವಾಡಶೆಟ್ಟಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net