ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ

28ss1karyappa abhimanigalu
Published on


ಮಡಿಕೇರಿ: ಮಹಾನ್ ಸೇನಾನಿ ಫೀ.ಮಾ. ಕಾರ್ಯಪ್ಪ ಅವರು ಶನಿವಾರಸಂತೆಯಲ್ಲಿ ಜನಿಸಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ.ಜಯಕುಮಾರ್ ಅಭಿಪ್ರಾಯಪಟ್ಟರು.


ಶನಿವಾರಸಂತೆ ಕಾರ್ಯಪ್ಪ ಅವರ ಅಭಿಮಾನಿಗಳು ಮತ್ತು ಸಾರ್ವಜನಿಕರ ವತಿಯಿಂದ ಶನಿವಾರ ಸಂತೆಯ ಫೀ.ಮಾ. ಕಾರ್ಯಪ್ಪ ಗ್ರಂಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.


ಫೀ.ಮಾ.ಕಾರ್ಯಪ್ಪ ಅವರು ಹುಟ್ಟಿದ ಈ ಮನೆಯನ್ನು ಸ್ಮಾರಕವನ್ನಾಗಿ ಮಾಡುವುದು ಮತ್ತು ಅವರ ಪ್ರತಿಮೆ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ. ಇದನ್ನು ನನಸು ಮಾಡಲು ಎಲ್ಲರೂ ಒಟ್ಟಾಗಿ ಹೋರಾಡುವ ಮೂಲಕ ಈ ಮನೆಯನ್ನು ಸ್ಮಾರಕವನ್ನಾಗಿ ಮಾಡಲು ಹಾಗೂ ಅವರ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಶನಿವಾರಸಂತೆ ಗ್ರಾ.ಪಂ.ಅಧ್ಯಕ್ಷೆ ಗೀತಾ ಹರೀಶ್, ಸದಸ್ಯ ಎಸ್.ಸಿ. ಶರತ್‌ಶೇಖರ್, ಪ್ರಮುಖರಾದ ಮಹಮ್ಮದ್ ಪಾಷಾ, ನಿವೃತ್ತ ಸೈನಿಕರಾದ ಬೆಳ್ಳಿಯಪ್ಪ, ನಾಗರಾಜ್, ಕಾರ್ಯಕ್ರಮದ ಆಯೋಜಕ ಬಿಲಾಲ್, ಮೋಹನ್‌ಲಾಲ್ ಚೌದುರಿ ಕುಬೇರ್ ಪುರೋಹಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net