ಆಂಬುಲೆನ್ಸ್ ಸೇವೆ ಒದಗಿಸಿ

Untitled design (8)
108 ವಾಹನ ಅಂಬುಲೇನ್ಸ್ ಒದಗಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರಿಗೆ ಮನವಿ ಪತ್ರ ಸಲ್ಲಿಸಿದರು. ದುರ್ಗರಾಜ ವಟಗಲ್, ಅಶೋಕ ಮುರಾರಿ, ಆರ್.ಕೆ.ನಾಯಕ, ಸಿದ್ದು ಮುರಾರಿ, ವಿಜಯ ಬಡಿಗೇರ್, ಕಿರಣ ಮುರಾರಿ, ಬಸವರಾಜ ಉದ್ಬಾಳ, ಮೌನೇಶ ಹಸಮಕಲ್ ಇದ್ದರು.
Published on

ಮಸ್ಕಿ: ಜನರಿಗೆ 108 ಆಂಬುಲೆನ್ಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪಟ್ಟಣದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಭಾನುವಾರ ಮನವಿ ಸಲ್ಲಿಸಿದರು.

ಆಂಬುಲೆನ್ಸ್ ಸೌಲಭ್ಯ ಕಲ್ಪಿಸಲು ಆಗ್ರಹ

ಪಟ್ಟಣ ಹಾಗೂ ತಾಲೂಕಿನಲ್ಲಿ ಆಂಬುಲೆನ್ಸ್ ವಾಹನಗಳು ದುರಸ್ತಿಗೆ ಬಂದಿವೆ. ಹಾಗಾಗಿ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲು ವಾಹನಗಳು ಇಲ್ಲದಂತಾಗಿದೆ. ಆದರೂ ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡುತ್ತಿಲ್ಲ. ಸಮಸ್ಯೆ ಕುರಿತು ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಕೂಡಲೇ ಅಧಿಕಾರಿಗಳು ಆಂಬುಲೆನ್ಸ್ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net