

ಮಡಿಕೇರಿ: ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ೮ನೇ ವರ್ಷದ ಕೊಡವ ನಮ್ಮೆ ಕಾರ್ಯಕ್ರಮಕ್ಕೆ ಕೊಡವ ಸಮಾಜಗಳ ನಡುವಿನ ಹಾಕಿ ಪಂದ್ಯಾವಳಿಯನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಯಿತು.
ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಪಂದ್ಯಾವಳಿ ಉದ್ಘಾಟಿಸಿದರು.
ಬಾಳೆಲೆ, ಮಡಿಕೇರಿ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ಬಾಳೆಲೆ ತಂಡ ಭಾಗವಹಿಸದ ಕಾರಣ ಮಡಿಕೇರಿ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಹುದಿಕೇರಿ ಮತ್ತು ಆರಾಯಿರನಾಡ್ ನಡುವೆ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಎರಡು ಗೋಲು ದಾಖಲಿಸಿ ಸಮಬಲ ಪಡೆದ ಕಾರಣ ಟೈಬ್ರೆಕರ್‌ನಲ್ಲಿ ೩-೨ ಗೋಲುಗಳ ಅಂತರದಲ್ಲಿ ಹುದಿಕೇರಿ ತಂಡ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಮೂರ್ನಾಡು ಮತ್ತು ಟಿ.ಶೆಟ್ಟಿಗೇರಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂರ್ನಾಡು ತಂಡ ೪-೨ ಅಂತರದಲ್ಲಿ ಗೆಲವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ವಿರಾಜಪೇಟೆ ಹಾಗೂ ಕುಶಾಲನಗರ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ವಿರಾಜಪೇಟೆ ತಂಡ ಬಾರದ ಕಾರಣ ಕುಶಾಲನಗರ ತಂಡ ನೇರವಾಗಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಬೇಂಗ್‌ನಾಡ್ ಮತ್ತು ಶ್ರೀಮಂಗಲ ತಂಡಗಳ ನಡುವೆ ನಡೆದ ಪಂದ್ಯಾವಳಿಯಲ್ಲಿ ಎರಡು ತಂಡಗಳು ಎರಡು ಗೋಲು ಗಳಿಸುವ ಮೂಲಕ ಸಮಬಲ ಪಡೆದ ಕಾರಣ ಟ್ರೈ ಬ್ರೆಕರ್‌ನಲ್ಲಿ ಶ್ರೀಮಂಗಲ ತಂಡ ೫-೨ ಗೋಲುಗಳ ಅಂತರದಲ್ಲಿ ಮುಂದಿನ ಹಂತ ಪ್ರವೇಶಿಸಿತು.
ಇದಕ್ಕೂ ಮೊದಲು ಒಕ್ಕೂಟದ ಪ್ರಮುಖರು ಅಗ್ನಿ ಚಾಮುಂಡಿ ಹಾಗೂ ಕಾಳಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್, ಮೂರ್ನಾಡು ಅಧ್ಯಕ್ಷ ನೆರವಂಡ ಅನೂಪ್ ಉತ್ತಯ್ಯ, ಚೆಟ್ಟಳ್ಳಿ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಮಕ್ಕಂದೂರು ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ಇತರರು ಉಪಸ್ಥಿತರಿದ್ದರು.
ಪಂದ್ಯಾವಳಿಯ ತೀರ್ಪುಗಾರರಾಗಿ ಮೈಂದಪಂಡ ಡ್ಯಾನಿ ದೇವಯ್ಯ, ಅರೇಯಡ ಚಿಣ್ಣಪ್ಪ, ಕಂಬಿರಂಡ ಬೋಪಣ್ಣ, ಅಜ್ಜಕಾಳಿರ ಪಳಗಂಪ್ಪ, ಬಲ್ಲಿಚಂಡ ನಾಣಯ್ಯ, ಚೇಂದಿರ ಡ್ಯಾನಿ, ಚೆಕ್ಕೆರ ಆದರ್ಶ್, ತಾಂತ್ರಿಕ ತೀರ್ಪುಗಾರರಾಗಿ ಪಳಗಂಡ ಅಪ್ಪಣ್ಣ, ಮಾದೇಯಂಡ ಸಂಪಿ ಪೂಣಚ್ಚ, ಕುಯಿಮಂಡ ಕಿರಣ್ ಕಾರ್ಯನಿರ್ವಹಿಸಿದರು.